ಹರಿಹರದ ಪಂಚಮಸಾಲಿ ಪೀಠದ ಜಗದ್ಗುರುಗಳಿಂದ ಭದ್ರೆಗೆ ಬಾಗಿನ

ಹರಿಹರದ ಪಂಚಮಸಾಲಿ ಪೀಠದ ಜಗದ್ಗುರುಗಳಿಂದ ಭದ್ರೆಗೆ ಬಾಗಿನ

ಹರಿಹರ, ಆ. 18- ಇಲ್ಲಿನ ವೀರಶೈವ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಲಾಯಿತು. ದಾವಣಗೆರೆಯಿಂದ 2, ಹರಪನಹಳ್ಳಿಯಿಂದ 2 ಹಾಗೂ ರಾಣೇಬೆನ್ನೂರಿನಿಂದ ಒಂದು ಸೇರಿ ಐದು ಬಾಗಿನಗಳನ್ನು ಮಾಡಿ, ಒಂದನ್ನು ನದಿಗೆ ಸಮರ್ಪಿಸಿ ಉಳಿದ ನಾಲ್ಕು ಬಾಗಿನವನ್ನು ಸಮಾಜದ  ಮುತ್ತೈದೆಯರಿಗೆ  ನೀಡಲಾಯಿತು.