ಬಳ್ಳಾರಿ ಸಿದ್ದಮ್ಮನವರ ಮೊಮ್ಮಗ ಚಿಟ್ರಕಿ ಶಿವಕುಮಾರ್‍ಗೆ ಸನ್ಮಾನ

ಬಳ್ಳಾರಿ ಸಿದ್ದಮ್ಮನವರ ಮೊಮ್ಮಗ ಚಿಟ್ರಕಿ ಶಿವಕುಮಾರ್‍ಗೆ ಸನ್ಮಾನ

ದಾವಣಗೆರೆ, ಆ.18 –  ನಗರದ ಕೆ. ಬಿ. ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್‌ನಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಜುಳ ಮಹೇಶ್‌ ಅವರ ನೇತ್ವತ್ವದಲ್ಲಿ ಬಳ್ಳಾರಿ ಸಿದ್ದಮ್ಮ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿದರು.

ರಾಜ್ಯ ಕಾರ್ಯದರ್ಶಿ ಶ್ರೀಮತಿ ಸುಧಾ ಜಯರುದ್ರೇಶ್‍ ಮಾತನಾಡಿ, ದಾವಣಗೆರೆಗೆ ಹೆಸರು ತಂದುಕೊಟ್ಟ ದಿಟ್ಟ ಧೀರ ಮಹಿಳೆ ಸ್ವಾತಂತ್ರ್ಯ ಹೋರಾಟಗಾರ್ತಿ, ಪ್ರಥಮ ಮಹಿಳಾ ಶಾಸಕಿ ದಿ. ಬಳ್ಳಾರಿ ಸಿದ್ದಮ್ಮನವರು ಮಹಿಳೆಯಾಗಿ ಮಾಡಿರುವ ಸಾಧನೆ ಅಪಾರ. ಅವರು ಸಮಾಜಕ್ಕೆ ಒಂದು ಮಾದರಿ ಹೆಣ್ಣು ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ದಿ.ಬಳ್ಳಾರಿ ಸಿದ್ದಮ್ಮನವರ ಮೊಮ್ಮಗ, ಚಿಟ್ರಕಿ ಶಿವಕುಮಾರ್‍ ವಚನಗಳನ್ನು ಹಾಡಿದರು. ಶಿವಕುಮಾರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್,  ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಪ್ರಮೀಳ ನಲ್ಲೂರು, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪುಷ್ಪ ವಾಲಿ, ಶ್ರೀಮತಿ ಭಾಗ್ಯ ಪಿಸಾಳೆ, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ರೂಪ ಕಾಟ್ವೆ,  ಉತ್ತರ ಮಂಡಲದ ಅಧ್ಯಕ್ಷೆ ಶ್ರೀಮತಿ ಸರ್ವಮಂಗಳ, ದಕ್ಷಿಣ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ, ಉತ್ತರ ಮಂಡಲದ ಅಧ್ಯಕ್ಷರಾದ  ಸಂಗನಗೌಡ್ರು, ಮಾಯಕೊಂಡ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಶ್ಯಾಗಲೆ , ಪದಾಧಿಕಾರಿಗಳಾದ ಚಂದ್ರಿಕ, ರೂಪ, ಮಂಜುಳ, ಮಂಗಳ, ಸರಸ್ವತಿ, ಚಲತಾ, ಶ್ವೇತಾ, ಸೌಮ್ಯ, ಕುಮಾರಿ, ಲಕ್ಷ್ಮಿ, ಸರಸ್ವತಿ, ಮಂಜುಳ ಬಿ. ವಿಜಯಲಕ್ಷ್ಮಿ, ವೀಣಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.