ಆರ್‌.ಜಿ. ವಿದ್ಯಾಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆ

ಆರ್‌.ಜಿ. ವಿದ್ಯಾಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆ

ದಾವಣಗೆರೆ, ಆ.18- ಸ್ಥಳೀಯ ಆರ್.ಜಿ. ವಿದ್ಯಾಸಂಸ್ಥೆಯ ಕಾಲೇಜು ಕಟ್ಟಡವನ್ನು ಸಿದ್ದವೀರಪ್ಪ ಬಡಾವಣೆಯ ಬಿಐಇಟಿ ಕಾಲೇಜು ರಸ್ತೆಯಲ್ಲಿ ಆರಂಭಿಸ ಲಾಗಿದ್ದು, ಸರಳ ಪೂಜಾ ಕಾರ್ಯಕ್ರಮದೊಂದಿಗೆ ನಿನ್ನೆ ಕಾರ್ಯಾರಂಭ ಮಾಡಿತು.

ಆರ್.ಜಿ.ಕಾಲೇಜು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ವೇತಾ ಆರ್.ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಹರಿಹರದ ಮಾಜಿ ಶಾಸಕ ಎಸ್‌.ಎಚ್‌. ಶಿವಶಂಕರ್‌  ಅವರು ನೂತನ ಕಾಲೇಜು ಕಟ್ಟಡವನ್ನು ಟೇಪು ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಎಸ್.ಹೆಚ್.ಅನಿತಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಸ್ಥಳೀಯ ಗಣ್ಯರಾದ ಜಯಚಂದ್‌ ಪಿ. ಜೈನ್‌, ಸುದರ್ಶನ್‌ ಜೈನ್‌, ಅಜಿತ್‌ ಓಸ್ವಾಲ್‌, ರಕ್ಷಕ್‌ ರಾಯ್ಕರ್‌, ಸುನಿಲ್‌ಕುಮಾರ್‌, ಕು. ಜಿ.ಕೆ. ಗೀತಾ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭ ಹಾರೈಸಿದರು.

ಆರ್‌.ಜಿ. ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಎಸ್‌ ವಿಜಯ್‌, ಉಪ ಪ್ರಾಂಶುಪಾಲ ಸಲಿಂ ಮಲಿಕ್‌, ಸಂಸ್ಥೆಯ ಸಿಬ್ಬಂದಿಗಳಾದ ಶ್ರೀಮತಿ ಸ್ನೇಹ, ಶ್ರೀಮತಿ ಬಿ.ಟಿ ರಶ್ಮಿ, ಎಲ್‌.ಎಂ ಶರಣಕುಮಾರ್‌ ಮತ್ತಿತರರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಬೀಳ್ಕೊಟ್ಟರು.