ಲಯನ್ಸ್ ಪ್ರೌಢಶಾಲೆಗೆ `ಎ’ ಗ್ರೇಡ್

ಲಯನ್ಸ್ ಪ್ರೌಢಶಾಲೆಗೆ `ಎ’ ಗ್ರೇಡ್

ದಾವಣಗೆರೆ, ಆ.17- ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಗೆ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಲಭಿಸಿದೆ.

ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 37 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶಾಲೆಗೆ ಅತ್ಯುತ್ತಮ ಶ್ರೇಣಿ – 1, ಡಿಸ್ಟಿಂಕ್ಷನ್ – 3, ಪ್ರಥಮ ಶ್ರೇಣಿ – 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಶಾಲೆಯನ್ನು ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯು `ಎ’ ಗ್ರೇಡ್ ಶಾಲೆ ಎಂದು ಪರಿಗಣಿಸಿದೆ. ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಹಾಗೂ ಲಯನ್ಸ್ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.