ಮಾಯಕೊಂಡ ತಾಲ್ಲೂಕು ರಚನೆಗೆ ಶಾಸಕರು ಒತ್ತಡ ಹೇರಬೇಕು

ರೈತ ಮುಖಂಡ ಎಂ.ಎಸ್‌.ಕೆ. ಶಾಸ್ತ್ರಿ ಮನವಿ

ದಾವಣಗೆರೆ, ಆ.17- ಮಾಯಕೊಂಡವನ್ನು ತಾಲ್ಲೂಕು ಮಾಡುವಂತೆ ಮುಖ್ಯಮಂತ್ರಿಗಳಿಗೆ ಶಾಸಕರು ಒತ್ತಡ ಹೇರುವಂತೆ ಮಾಯಕೊಂಡ ಪುರ ಅಭಿವೃದ್ಧಿ ಕ್ರಿಯಾಶೀಲ ವೇದಿಕೆ ಹಾಗೂ ಮಾಯಕೊಂಡ ತಾಲ್ಲೂಕು ಹೋರಾಟ ಸಮಿತಿಯು ಶಾಸಕ ಪ್ರೊ. ಲಿಂಗಣ್ಣ ಅವರಿಗೆ ಮನವಿ ಮಾಡಿತು.

ಈಗಲಾದರೂ ಕಂದಾಯ ಸಚಿವ ಆರ್. ಅಶೋಕ್‌ರವರಿಂದ ಬಂದ ಪತ್ರಕ್ಕೆ ಮೊದಲು ಮಾಯಕೊಂಡ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿಕೊಡುವ ಬಗ್ಗೆ ಶಿಫಾರಸ್ಸು ಪತ್ರ ಬರೆಯುವಂತೆ ಜಿಲ್ಲಾಧಿಕಾರಿಯವರಿಗೆ ತಾವು ಒತ್ತಾಯ ಪಡಿಸಿರಿ ಎಂಬುದಾಗಿ ಜನತೆ ಆಗ್ರಹಪಡಿಸಿದರು. ಇದಕ್ಕೆ ಉತ್ತರಿಸಿದ ಲಿಂಗಣ್ಣನವರು, ನಾನೂ ಸಹ ಈ ಬಗ್ಗೆ ಪ್ರಯತ್ನ ಪಡುತ್ತಿದ್ದೇನೆ ಎಂದರು.

ನಿಯೋಗದಲ್ಲಿ ಮಾಯಕೊಂಡ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಶಾಸ್ತ್ರಿ, ಬಿ.ಕೆ. ಬೀರಪ್ಪ, ಗೌಡರ ಅಶೋಕ, ರಾಮಜೋಗಿ ಪ್ರಭು, ಗಾಳೇರ ಚಂದ್ರಪ್ಪ, ಎಸ್.ಜಿ. ರುದ್ರೇಶ್, ಅಶೋಕ್, ಮಾನಮ್ಮ ಆಚಾರ್, ಕೋಳಿ ರಂಗಸ್ವಾಮಿ ನಾಯಕ, ಗಂಟೆಪ್ಪಳ ನಿಜಗುಣಪ್ಪ, ಗುಡ್ಲು ತಿಪ್ಪೇಸ್ವಾಮಿ, ಬಿ.ಸಿ. ಬಸವರಾಜಪ್ಪ, ಭಾಗವ್ವರ ಹನುಮಂತಪ್ಪ, ಹೊಳಿಯಪ್ಪಳ ಮಲ್ಲಪ್ಪ, ಮಾಜಿ ಅಧ್ಯಕ್ಷ ಹನುಮಂತಪ್ಪ, ಮಹಮ್ಮದ್ ಫಾರೂಕ್ ಇನ್ನಿತರರಿದ್ದರು.