20ನೇ ವಾರ್ಡ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ರಾಘವೇಂದ್ರ ಆಯ್ಕೆ

ದಾವಣಗೆರೆ, ಆ.10- ನಗರದ 20ನೇ ವಾರ್ಡಿನ  ಕಾಂಗ್ರೆಸ್ ಪಕ್ಷದ ಘಟಕವನ್ನು ಪುನರ್‌ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಅಲೆಕ್ಸಾಂಡರ್ (ಜಾನ್,) ಅಧ್ಯಕ್ಷರಾಗಿ ರಾಘವೇಂದ್ರ ಡಿ, ಉಪಾಧ್ಯಕ್ಷರುಗಳಾಗಿ ಕೃಷ್ಣಪ್ಪ ವಿ, ರಾಜು ಕೆ, ಜಗನ್ ಎನ್, ಮಾರುತಿ ಆಯ್ಕೆಯಾಗಿದ್ದಾರೆ.

ಖಜಾಂಚಿಯಾಗಿ ಅನಿಶ್ ಬಾಷಾ, ಕಾರ್ಯದರ್ಶಿಯಾಗಿ ಸಂತೋಷ್ ಎನ್ ನಾಯ್ಕ, ಸಹ ಕಾರ್ಯದರ್ಶಿಯಾಗಿ ಸತ್ಯರಾಜ್ ಪಿ, ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ (ಸೋಮ್ಲಿ) ಅವರನ್ನು ನೇಮಿಸಲಾಗಿದೆ.

ಸದಸ್ಯರುಗಳಾಗಿ  ಶಿವಶಂಕರ ಎಲ್, ಧರ್ಮ ಎಂ, ವೆಂಕಟೇಶ್ ನಾಯ್ಕ ಆರ್, ಲಿಂಗರಾಜು ನಾಯ್ಕ, ವಿಕ್ರಮ್ ವಿ ಹಾಗೂ ಮಹಾನಗರಪಾಲಿಕೆ ಸದಸ್ಯರಾದ ಮೀನಾಕ್ಷಿ ಜಗದೀಶ್ ಅವರು ಆಯ್ಕೆಯಾಗಿದ್ದಾರೆ.