ಭಾನುವಳ್ಳಿಯಲ್ಲಿ ತೊಟ್ಟಿಲು ಶಾಸ್ತ್ರದ ಸಿಹಿಯೂಟ ಸೇವಿಸಿ ಅಸ್ವಸ್ಥ

ಭಾನುವಳ್ಳಿಯಲ್ಲಿ ತೊಟ್ಟಿಲು ಶಾಸ್ತ್ರದ ಸಿಹಿಯೂಟ ಸೇವಿಸಿ ಅಸ್ವಸ್ಥ

ಮಲೇಬೆನ್ನೂರು, ಆ.10- ತೊಟ್ಟಿಲು ಶಾಸ್ತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಹಿ ಊಟ ಮಾಡಿದವರ ಪೈಕಿ 49 ಮಂದಿ ಅಸ್ವಸ್ಥರಾಗಿರುವ ಘಟನೆ ಭಾನುವಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದೆ. 

ಅಸ್ವಸ್ಥರಾಗಿದ್ದ ಮಕ್ಕಳು, ವಯಸ್ಕರನ್ನು ಹರಿಹರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು. ಅದೃಷ್ಟವಷಾತ್‌ ಯಾವುದೇ ಪ್ರಾಣಾಪಾಯವಾಗಲಿಲ್ಲ. ಬಹುತೇಕರು ಗುಣಮುಖರಾಗಿದ್ದು, ಒಂದು ಮಗು ಸೇರಿದಂತೆ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಸಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನಂತರ ಅವರೂ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.