ದೆಹಲಿ ಪ್ರತಿಭಟನೆಗೆ ನಗರದಿಂದ ಕಾಂಗ್ರೆಸ್ ಪ.ಜಾತಿ ಮುಖಂಡರು

ದಾವಣಗೆರೆ, ಆ.10- ಕೇಂದ್ರದ ಬಿಜೆಪಿ ಸರ್ಕಾರದ ದಲಿತ ಮತ್ತು ಆದಿವಾಸಿಗಳ ವಿರೋಧಿ ಆಡಳಿತ ಖಂಡಿಸಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಡಾ. ನಿತಿನ್ ರಾವತ್ ನೇತೃತ್ವದಲ್ಲಿ ನಾಡಿದ್ದು ದಿನಾಂಕ 12 ರ ಗುರುವಾರ ದೆಹಲಿ ಜಂತರ್ ಮಂತರ್‌ನಲ್ಲಿ ನಡೆ ಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ನಗರದಿಂದ 25 ಜನ ತೆರಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ.ಜಾತಿ ವಿಭಾಗದ ಅಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಾ. ತುಳಸೀನಾಯ್ಕ, ಜಿ. ರಾಕೇಶ್, ಬಿ.ಎನ್. ರಂಗನಾಥಸ್ವಾಮಿ ಉಪಸ್ಥಿತರಿದ್ದರು.