ಅನಾಥ ಮಕ್ಕಳ ಶಿಕ್ಷಣಕ್ಕೆ 1.25 ಲಕ್ಷ ರೂ. ನೀಡಿ ಮಾನವೀತೆ ಮೆರೆದ ಶಾಸಕರು

ಜಗಳೂರು, ಆ.10 -ಪಟ್ಟಣದಲ್ಲಿ ಕೊರೊನಾದಿಂದ ತಂದೆ-ತಾಯಿ ಯನ್ನು ಕಳೆದುಕೊಂಡು ಅನಾಥರಾದ ಇಬ್ಬರು ಮಕ್ಕಳ ಶಿಕ್ಷಣಕ್ಕೆ   ಸಭೆಯಲ್ಲಿ 1.25 ಲಕ್ಷ ರೂ. ಸ್ವಂತ ಹಣ ನೀಡಿದ ಶಾಸಕ ರಾಮಚಂದ್ರ ಮಾನವೀಯತೆ ಮೆರೆದಿದ್ದಾರೆ.

ಈ ಅನಾಥ ಮಕ್ಕಳ ಕುಟುಂಬದ ಧಾರುಣ ಸ್ಥಿತಿಯನ್ನು  ನವಚೇತನಾ ಸಂಸ್ಥೆಯ ಮುಖ್ಯಸ್ಥ ಪಿ.ಎಸ್. ಅರವಿಂದ್ ಶಾಸಕರ‌ ಗಮನಕ್ಕೆ ತಂದಿದ್ದರು. ಇವರ ಮನವಿಗೆ ಸ್ಪಂದಿಸಿದ ಶಾಸಕ ರಾಮಚಂದ್ರ ತಕ್ಷಣವೇ ನೆರವು ನೀಡಿ ಸ್ಪಂದಿಸಿದ್ದಾರೆ.