ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪತ್ರಿಕಾ ವಿತರಕ ರಾಘವೇಂದ್ರ ಸಾವು

ಮಲೆಬೆನ್ನೂರು, ಆ.8 – ಪಟ್ಟಣದ ಶ್ರೀ ಲಕ್ಷ್ಮೀರಂಗನಾಥ ಬುಕ್ ಸ್ಟಾಲ್ ಮಾಲೀಕರೂ, ವಿವಿಧ ಪತ್ರಿಕೆಗಳ ವಿತರಕರೂ ಆಗಿದ್ದ ವಿ.ರಾಘವೇಂದ್ರ (55) ಅವರು ಭಾನುವಾರ ಸಂಜೆ ನಿಧನರಾಗಿದ್ದಾರೆ. 

ರಾಘವೇಂದ್ರ ಅವರು ಶುಕ್ರವಾರ ಇಲ್ಲಿನ ಎಸ್‌.ಹೆಚ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ವೇಗವಾಗಿ ಬಂದ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿತ್ತು. ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಹಾಗೂ ಮೂವರು ಪುತ್ರಿ ಅಗಲಿದ್ದಾರೆ. 

ನಾಳೆ ದಿನಾಂಕ 9 ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ಮಲೇಬೆನ್ನೂರಿನ ಆರ್ಯವೈಶ್ಯ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.