ಜಿಲ್ಲೆಯಲ್ಲಿ ಮೂವರಿಗೆ ಪಾಸಿಟಿವ್,19 ಗುಣಮುಖ

ದಾವಣಗೆರೆ, ಆ.6- ಜಿಲ್ಲೆಯಲ್ಲಿ ಶುಕ್ರವಾರ 3 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 19 ಜನರು ಗುಣಮುಖರಾಗಿದ್ದಾರೆಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸ ಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 2 ಹಾಗೂ ಹರಿಹರದಲ್ಲಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 221 ಸಕ್ರಿಯ ಪ್ರಕರಣಗಳಿವೆ. ಒಬ್ಬರಲ್ಲಿ ಬ್ಲಾಕ್ ಫಂಗಸ್  ಪತ್ತೆಯಾಗಿದ್ದು, 24  ಸಕ್ರಿಯ ಪ್ರಕರಣ ಗಳಿವೆ. ಜಿಲ್ಲೆಯಲ್ಲಿ ಕಳೆದೊಂದು ವಾರದ ಅಂಕಿ ಅಂಶಗಳ ಪ್ರಕಾರ ಕೊರೊನಾ ಪಾಸಿಟಿವಿಟಿ ದರ ಶೇ.0.44ರಷ್ಟಿದೆ. ಮರಣ ದರ ಶೂನ್ಯಕ್ಕೆ ಇಳಿದಿದೆ. ರಾಜ್ಯದ ಸರಾಸರಿ ಪಾಸಿಟಿವಿಟಿ ದರ ಶೇ.1.12ರಷ್ಟಿದೆ.