ಚಾಲನಾ ಅನುಜ್ಞಾ ಪತ್ರಗಳಿಗೆ ಸ್ಲಾಟ್‌ ನಿಗದಿಗೆ ಸೂಚನೆ

ದಾವಣಗೆರೆ, ಆ.6- ಲಾಕ್‌ಡೌನ್ ಅವಧಿಯಲ್ಲಿ ನಿಗದಿಯಾಗಿದ್ದ ಚಾಲನಾ ಅನುಜ್ಞಾ ಪತ್ರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಕಳೆದ ಜೂನ್ 21 ರಿಂದ ಇಲ್ಲಿಯವರೆಗೆ ವಿಲೇವಾರಿ ಮಾಡಲಾಗಿದೆ.

ಕೋವಿಡ್ ಮೂರನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಹೊಸ ಅರ್ಜಿಗಳ ಸ್ಲಾಟ್‌ಗಳನ್ನು ಮುಂದಿನ 7 ದಿನಗಳಂತೆ ಮಾತ್ರ ಸ್ಲಾಟ್ ನಿಗದಿಪಡಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಫೋನ್‌: 9449863485 ಅಥವಾ ನೇರವಾಗಿ ಕಚೇರಿ ಸಂಪರ್ಕಿಸಲು  ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.