ರಸ್ತೆ ಅಪಘಾತ : ಬೈಕ್ ಸವಾರನ ಸಾವು

ದಾವಣಗೆರೆ, ಆ.5- ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚನ್ನಗಿರಿ ತಾಲ್ಲೂಕಿನ ದೋಣಿಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. 

ಮಣ್ಣಮ್ಮ ಶಾಲೆಯ ಸಮೀಪದ ದಾವಣಗೆರೆ-ಚನ್ನಗಿರಿ ಮುಖ್ಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಬೈಕ್ ಸವಾರ ನಲ್ಲೂರು ಗ್ರಾಮದ 26 ವರ್ಷದ ಬಾರ್‍ಬೆಂಡಿಂಗ್ ಕೆಲಸ ಮಾಡುತ್ತಿದ್ದ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚನ್ನಗಿರಿಯಿಂದ ನಲ್ಲೂರು ಗ್ರಾಮಕ್ಕೆ ಬೈಕಿನಲ್ಲಿ ತೆರಳುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಈತ ಸ್ಥಳೀಯ ಬಿಆರ್‍ಟಿ ಕಾಲೋನಿ ನಿವಾಸಿ ಎಂದು ತಿಳಿದು ಬಂದಿದೆ.