ಪೊಲೀಸ್ ಅಧಿಕಾರಿಗಳ ನಿವೃತ್ತಿ ಜಿಲ್ಲಾ ಪೊಲೀಸ್ ಬೀಳ್ಕೊಡುಗೆ

ಪೊಲೀಸ್ ಅಧಿಕಾರಿಗಳ ನಿವೃತ್ತಿ   ಜಿಲ್ಲಾ ಪೊಲೀಸ್ ಬೀಳ್ಕೊಡುಗೆ

ದಾವಣಗೆರೆ, ಆ.5- ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಗಾಂಧಿನಗರ ಪಿಎಸ್‌ಐ ಕೃಷ್ಣಪ್ಪ, ಡಿಎಆರ್ ಘಟಕದ ಆರ್‌ಎಸ್‌ಐ ಯಲ್ಲಪ್ಪ, ಬಸವ ನಗರ ಠಾಣೆ ಎಎಸ್‌ಐ ಸತ್ಯನಾರಾಯಣ, ದಾವಣಗೆರೆ ಗ್ರಾಮಾಂತರ ಠಾಣೆಯ ಶ್ರೀರಾಮರೆಡ್ಡಿ ಹಾಗೂ ಸ್ವ ಇಚ್ಛಾ ನಿವೃತ್ತಿ ಪಡೆದ ಉತ್ತರ ಸಂಚಾರ ಠಾಣೆಯ ಪಿಎಸ್‌ಐ ಸತೀಶ್ ಬಾಬು ಅವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಎಸ್ಪಿ ಕಚೇರಿಯಲ್ಲಿಂದು ಎಸ್ಪಿ ಸಿ.ಬಿ. ರಿಷ್ಯಂತ್ ಅಭಿನಂದಿಸಿ, ನಿವೃತ್ತಿ ಜೀವನಕ್ಕೆ ಶುಭ ಕೋರಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸಹಾಯಕ ಅಡಳಿತಾಧಿಕಾರಿ ನಾಗೇಶ್ ಹಾಗೂ ಸಿಬ್ಬಂದಿಗಳಿದ್ದರು.