ಕೋವಿಡ್ ಸೆಂಟರ್‌ಗಳಾಗಿದ್ದ ವಿದ್ಯಾರ್ಥಿ ನಿಲಯಗಳ ಸ್ವಚ್ಛಕ್ಕೆ ಆಗ್ರಹ

ದಾವಣಗೆರೆ, ಆ.5- ಕೋವಿಡ್ ಸೆಂಟರ್ ಗಳನ್ನಾಗಿ ಬಳಸಿದ ವಿದ್ಯಾರ್ಥಿ ನಿಲಯಗಳನ್ನು ಸ್ವಚ್ಛಗೊಳಿಸುವಂತೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಗೋವಿಂದ್ ಹಾಲೇಕಲ್ಲು ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಜೆ.ಹೆಚ್. ಪಟೇಲ್‌ ಬಡಾವಣೆಯ ಮಹಿಳಾ ವಿದ್ಯಾರ್ಥಿ ನಿಲಯಗಳನ್ನು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್ ‌ಕೇರ್ ಸೆಂಟರ್‌ಗಳಾಗಿ ಬಳಸಿಕೊಂಡಿತ್ತು. ಆದರೆ, ಕೊರೊನಾ ಅಲೆ ಕಡಿಮೆ ಆಗಿರುವುದರಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಕಾಲೇಜುಗಳು ಪ್ರಾರಂಭವಾಗಿವೆ. ಹಾಗಾಗಿ ಹಳ್ಳಿ ಕಡೆ ಮುಖ ಮಾಡಿದ್ದ ವಿದ್ಯಾರ್ಥಿಗಳು ಪುನಃ ಹಾಸ್ಟೆಲ್‌ಗಳಿಗೆ ಬರುತ್ತಿದ್ದಾರೆ. ಆದರೆ, ನಿಲಯಗಳನ್ನು ಸ್ವಚ್ಛತೆ ಮಾಡದೆ ಪ್ರಾರಂಭಿಸಿದ್ದು, ಅದರಲ್ಲಿಯೇ ವಿದ್ಯಾರ್ಥಿಗಳು ಇರುವಂತಹ ಪರಿಸ್ಥಿತಿ ಬಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.