ಶಾಸಕರಿಂದ ಯೋಧ ಬೀರಪ್ಪಗೆ ಸ್ವಾಗತ

ಶಾಸಕರಿಂದ ಯೋಧ ಬೀರಪ್ಪಗೆ ಸ್ವಾಗತ

ಹರಿಹರ, ಆ.4- ಭಾರತೀಯ ಸೇನೆಯಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಪಡೆದು ಸ್ವಗ್ರಾಮ ಭಾನುವಳ್ಳಿಗೆ ನಿನ್ನೆ ಆಗಮಿಸಿದ ವೀರ ಯೋಧ ಕೆ.ಎಸ್.ಬೀರಪ್ಪ ಅವರನ್ನು ಹರಿಹರ ರೈಲ್ವೆ ನಿಲ್ದಾಣದಲ್ಲಿ ಶಾಸಕ ಎಸ್.ರಾಮಪ್ಪ ಹೂಗುಚ್ಛ ನೀಡಿ ಸ್ವಾಗತಿಸಿದರು. 

ಈ ಸಂದರ್ಭದಲ್ಲಿ ಬೀರಪ್ಪ ಅವರ ಸೇವೆಯನ್ನು ಪ್ರಶಂಶಿಸಿದರು. ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್ ಸೇರಿ ದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದು, ಬೀರಪ್ಪ ಅವರನ್ನು ಬರ ಮಾಡಿಕೊಂಡರು.

ಮೆರವಣಿಗೆ : ಗುರುವಾರ ಮಧ್ಯಾಹ್ನ 2.30ಕ್ಕೆ ಭಾನುವಳ್ಳಿ ಗ್ರಾಮದಲ್ಲಿ ಕೆ.ಎಸ್.ಬೀರಪ್ಪ ಅವರಿಗೆ ಅದ್ಧೂರಿ ಮೆರವಣಿಗೆ ಮೂಲಕ ಸನ್ಮಾನಿಸುವ ಕಾರ್ಯಕ್ರಮವನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದಾರೆ.