ಸಹೋದರಿಯರ ಹತ್ಯೆ ಪ್ರಕರಣ : ಬಂಧನ

ದಾವಣಗೆರೆ, ಆ.3- ಸಹೋದರಿಯರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಬಂಧಿತ ಆರೋಪಿ. ಈತ ಮೃತ ಗೌರಮ್ಮಳ ಪತಿಯಾಗಿದ್ದು, ಬೆಂಗ ಳೂರಿನಲ್ಲಿ ಪೊಲೀಸರು ಸೆರೆ ಹಿಡಿದಿದ್ದಾರೆ‌.

ಗೌರಮ್ಮ ಹಾಗೂ ರಾಧಕ್ಕ ಸ್ವಂತ ಅಕ್ಕ ತಂಗಿಯರು. ತಂದೆ ಲೋಕಪ್ಪ ಹಾಗೂ ಹಂಪಮ್ಮ ದಂಪತಿಯ ಐವರು ಪುತ್ರಿಯರಲ್ಲಿ ಇವರೂ ಇಬ್ಬರು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಗೌರಮ್ಮ ಹಾಗೂ ರಾಧಕ್ಕ ಇಬ್ಬರು ದಾವಣಗೆರೆಯ ಆಂಜನೇಯ ಕಾಟನ್ ಮಿಲ್ ನಲ್ಲಿ‌ ಕೂಲಿ ಕೆಲಸ ಮಾಡುತ್ತಾ ಆಂಜನೇಯ ಕಾಟನ್ ಮಿಲ್ ಬಡಾವಣೆಯಲ್ಲಿ ವಾಸವಾಗಿದ್ದರು. ಆದರೆ ಕಳೆದ ಹತ್ತು ದಿನಗಳ ಹಿಂದೆ ಇವರಿಬ್ಬರನ್ನು ಹತ್ಯೆ ಮಾಡಲಾಗಿತ್ತು. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು ಕೊಲೆ ನಂತರ ನಾಪತ್ತೆಯಾಗಿದ್ದ ಆರೋಪಿ ಮಂಜುನಾಥ್ ಮೇಲೆ ಶಂಕೆ ವ್ಯಕ್ತವಾಗಿತ್ತು. ಮೃತರ ಅಕ್ಕನ ಪುತ್ರಿ ಚಂದ್ರಮ್ಮ  ಹೇಳಿದಾಗಲೇ ಹಂತಕನ ಸುಳಿವು ಸಿಕ್ಕಿತ್ತು‌.‌ 

ರಾಧಾಳದ್ದು ಹತ್ತು ವರ್ಷಗಳ ಹಿಂದೆಯೇ ವಿವಾಹ ವಿಚ್ಛೇದನವಾಗಿದೆ. ಅಂದಿನಿಂದ ಗೌರಮ್ಮಳೊಂದಿಗೆ ಜೀವನ ಸಾಗಿಸುತ್ತಿದ್ದಳು. ಆದರೆ ಸಹೋದರಿಯರ ಹತ್ಯೆ ಬಗ್ಗೆ ತನಿಖೆ ನಡೆಸಿದಾಗ, ಗೌರಮ್ಮ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪದೇ ಪದೇ ಮಂಜುನಾಥ್ ಜಗಳವಾಡುತ್ತಿದ್ದ ಎನ್ನಲಾಗಿದೆ.