ಭದ್ರಾ ಕಾಡಾ ಎಇಇ ನಾರಾಯಣ ಸ್ವಾಮಿ ನಿವೃತ್ತಿ: ಬೀಳ್ಕೊಡುಗೆ

ಭದ್ರಾ ಕಾಡಾ ಎಇಇ ನಾರಾಯಣ ಸ್ವಾಮಿ ನಿವೃತ್ತಿ: ಬೀಳ್ಕೊಡುಗೆ

ಮಲೇಬೆನ್ನೂರು, ಆ.3- ಭದ್ರಾ ಕಾಡಾ ಹರಿಹರ ಉಪವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಂ.ವಿ. ನಾರಾಯಣ ಸ್ವಾಮಿ ವಯೋ ನಿವೃತ್ತಿ ಹೊಂದಿದ್ದು, ಅವರನ್ನು ಬೀಳ್ಕೊಡಲಾಯಿತು.

ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಮಹಾಮಂಡಳದ ನಿರ್ದೇಶಕರಾದ ಶಿರಮಗೊಂಡನಹಳ್ಳಿಯ ಎ.ಬಿ. ಕರಿಬಸಪ್ಪ, ಎ. ಹನುಮಂತ ರೆಡ್ಡಿ, ವಾಸನ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಕುಂಬಳೂರು ಸದಾಶಿವ ಮತ್ತಿತರರು ನಾರಾಯಣ ಸ್ವಾಮಿ ಅವರನ್ನು ಸನ್ಮಾನಿಸಿದರು.