ಕದಳಿ ಕಮ್ಮಟದಿಂದ ಗುರುವಂದನೆ

ಕದಳಿ ಕಮ್ಮಟದಿಂದ ಗುರುವಂದನೆ

ದಾವಣಗೆರೆ, ಆ.3- ಕದಳಿ ಮಹಿಳಾ ವೇದಿಕೆಯ ನಗರ ಘಟಕದ ವತಿಯಿಂದ 126 ನೇ ಕದಳಿ ಕಮ್ಮಟ ಹಾಗು ಹಡಪದ ಅಪ್ಪಣ್ಣನವರ ಜಯಂತಿಯನ್ನು ಕಳೆದ ವಾರ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ನಗರ ಘಟಕದ ಅಧ್ಯಕ್ಷರಾದ ವಿನೋದ ಅಜಗಣ್ಣನವರ್ ವಹಿಸಿದ್ದರು.  

ಇದೇ ಸಂದರ್ಭದಲ್ಲಿ ಗುರು ಪೂರ್ಣಿಮೆಯ ಪ್ರಯುಕ್ತ ವಚನ ಗುರುಗಳಾದ ರೇವಣಸಿದ್ದಪ್ಪ ಅವರಿಗೆ ಗುರು ವಂದನೆ ಸಲ್ಲಿಸಲಾಯಿತು.

ಕದಳಿ ಮಹಿಳಾ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀಮತಿ ಶಂಶಾದ್ ಬೇಗಂ, ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಆಶಾ ಎಂ. ಪಾಟೀಲ್, ಸಹ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಪ್ರಸನ್ನ ಮತ್ತು ತಾಲ್ಲೂಕು ಘಟಕದ  ಅಧ್ಯಕ್ಷರಾದ ಶ್ರೀಮತಿ ಮತಿಕುಸುಮಾ ಲೋಕೇಶ್ ಉಪಸ್ಥಿತರಿದ್ದರು. 

ವಾಟ್ಸಾಪ್‍ ಮುಖೇನ ನಡೆದ ಕಾರ್ಯಕ್ರಮದಲ್ಲಿ ಶ್ರೀಮತಿ ಸೌಮ್ಯ ಸತೀಶ್ ಪ್ರಾರ್ಥಿಸಿದರು, ಶ್ರೀಮತಿ ಕೆ.ಆರ್.ವಸಂತ ಸ್ವಾಗತಿಸಿದರು. ಶ್ರೀಮತಿ ಮಮತಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.