ಆತ್ಮ ವಿಶ್ವಾಸ, ಸದೃಢ ಮನಸ್ಸು ಯಶಸ್ಸಿನ ಆಯುಧಗಳು

ಆತ್ಮ ವಿಶ್ವಾಸ, ಸದೃಢ ಮನಸ್ಸು  ಯಶಸ್ಸಿನ ಆಯುಧಗಳು

ದಾವಣಗೆರೆ, ಆ.3- ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಯಶಸ್ಸು ಪಡೆಯಲು ಜ್ಞಾನವೇ ಶಕ್ತಿಯಾಗಿದೆ. ಜ್ಞಾನ ಮತ್ತು ಕೌಶಲ್ಯ ಹೆಚ್ಚಿಸಿಕೊಂಡಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಆತ್ಮವಿಶ್ವಾಸ ಮತ್ತು ಸದೃಢ ಮನಸ್ಸು ಯಶಸ್ಸಿನ ಆಯುಧಗಳು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ಅಭಿಪ್ರಾಯಪಟ್ಟರು.

ನಗರದ ಚೈತನ್ಯ ಹೈ-ಟೆಕ್ ವಾಣಿಜ್ಯ ಮತ್ತು ನಿರ್ವಹಣಾ ಪದವಿ ಕಾಲೇಜಿನಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಅಭಿಷೇಕ್ ಬೇತೂರು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪ್ರೀತಿ, ಐಸಿಐಸಿಐ ಕರ್ನಾಟಕ ರಿಕ್ರ್ಯೂಟ್‌ಮೆಂಟ್ ಮ್ಯಾನೇಜರ್ ಸುರೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.