ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರಿಗೆ ಪ್ರಬಂಧ ಸ್ಪರ್ಧೆ

ದಾವಣಗೆರೆ, ಜು. 29-  ಮಹಾನಗರ ಪಾಲಿಕೆಯ ವತಿಯಿಂದ ಆಗಸ್ಟ್ 15 ರವರೆಗೆ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ಜೀವ ವೈವಿಧ್ಯತಾ ದಿನಾಚರಣೆ ಅಭಿಯಾನದ ಅಂಗವಾಗಿ ದಾವಣಗೆರೆ ನಗರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಾಗೂ ಮಹಿಳೆಯರಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ‘ನಮ್ಮ ಸುತ್ತಲಿನ ಜೀವ ಸಂಕುಲ’ ವಿಷಯ ಕುರಿತು.  ಸಾರ್ವಜನಿಕರಿಗೆ ‘ಜೀವ ವೈವಿಧ್ಯ ಸಂರಕ್ಷಣೆ ಏಕೆ? ಹೇಗೆ? ಹಾಗೂ ಮಹಿಳೆ ಯರಿಗೆ `ಅಡುಗೆ ಮನೆ ತ್ಯಾಜ್ಯ ವಿಲೇವಾರಿ ಹೊಸ ಆಲೋಚನೆಗಳೇನು?’ಎಂಬ ವಿಷಯಗಳ ಮೇಲೆ ಪ್ರಬಂಧ ಸ್ಪರ್ಧೆ ನಡೆಯಲಿದೆ. 3 ಪುಟಕ್ಕೆ ಮೀರದಂತೆ ಪ್ರಬಂಧ ಬರೆದು ಆಗಸ್ಟ್ 5 ರೊಳಗಾಗಿ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗಕ್ಕೆ ಸಲ್ಲಿಸಬೇಕು. ವಿವರಕ್ಕೆ ಜಗದೀಶ್ ಎಸ್.ಆರ್ ತಾಂತ್ರಿಕ ಸಹಾಯಕರು (9632983527), ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರುಗಳಾದ ಎಂ. ಗುರುಸಿದ್ಧಸ್ವಾಮಿ (9880531823), ಗಿರೀಶ್ ದೇವರಮನಿ (9964328259), ಹೆಚ್.ಸಿ. ಜಯಮ್ಮ (9880155367), ರೋಹಿಣಿ ಎಸ್.ಎಂ (9035105917), ರಘು ದೊಡ್ಡಮನಿ (9844363674) ಅವರನ್ನು ಸಂಪರ್ಕಿಸಬ ಹುದು ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.