ಎಲ್. ಬಸವರಾಜ್‌ಗೆ ಸನ್ಮಾನ

ಎಲ್. ಬಸವರಾಜ್‌ಗೆ ಸನ್ಮಾನ

ದಾವಣಗೆರೆ, ಜು.13- ನಗರದ ನ್ಯಾಯವಾದಿಗಳೂ, ರಾಜಕೀಯ ಮುಖಂಡರೂ ಆದ ಎಲ್. ಬಸವರಾಜ್ ಅವರನ್ನು ಬಾಡಿಗೆದಾರರ ವತಿಯಿಂದ ಸನ್ಮಾನಿಸಲಾಯಿತು. ಕಟ್ಟಡ ಬಾಡಿಗೆದಾರರ ಮಾಸಿಕ ಬಾಡಿಗೆಯಲ್ಲಿ ವಿನಾಯತಿ ನೀಡಿ ಮಾನವೀಯತೆ ಮೆರೆದ, ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಎಲ್. ಬಸವರಾಜ್ ಅವರನ್ನು ಬಾಡಿಗೆದಾರರು ಅಭಿನಂದಿಸಿ, ಬಸವರಾಜ್ ಅವರ ಹೃದಯ ವೈಶಾಲ್ಯತೆಯನ್ನು ಕೆೋಂಡಾಡಿದರು.

ಈ ಸಂದರ್ಭದಲ್ಲಿ ಶ್ಯಾಗಲೆ ಬಸವರಾಜಪ್ಪ ಮೇಷ್ಟ್ರು, ಸೋಮಣ್ಣ, ಸತೀಶ್, ಪ್ರಕಾಶ್, ವಕೀಲರಾದ ಎಸ್.ಆರ್. ಪ್ರವೀಣ್  ಮತ್ತಿತರರು ಉಪಸ್ಥಿತರಿದ್ದರು.