ಕೊರೊನಾ : ಹೆಚ್ಚುವರಿ ಬಸ್ ಬಿಡಲಿ

ಮಾನ್ಯರೇ,

ಪ್ರಸ್ತುತ ಅನ್‍ಲಾಕ್ ಒಂದರ ಅಡಿಯಲ್ಲಿ ಕೆಲವೇ ಕೆಲವು ಸಾರಿಗೆ ಬಸ್ ಗಳನ್ನು ಬಿಟ್ಟಿದ್ದು, ಪ್ರಯಾಣಿಕರ ಸಂ ಖ್ಯೆಯು ಹೆಚ್ಚಾಗಿರುವು ದರಿಂದ  ಬಸ್ ಗಳಲ್ಲಿ ಸಾಮಾಜಿಕ ಅಂತರದ ಪರಿಪಾಲನೆಯಾಗುತ್ತಿಲ್ಲ. ಕೊರೊನಾದ ಕರಿನೆರಳು ಇನ್ನೂ ಪೂರ್ತಿ ಕಡಿಮೆಯಾಗಿಲ್ಲದ ಈ ಸಮಯದಲ್ಲಿ ತುಂಬಿದ ಪ್ರಯಾಣಿಕರಿಂದ ಕೂಡಿದ ಬಸ್ ಗಳು ಕೊರೊನಾದ ಸಾಗಾಣಿಕೆಗೆ ರಹದಾರಿಗಳಾಗುತ್ತವೆ. ಆದ್ದರಿಂದ ಆದಷ್ಟು ಬೇಗ ಹೆಚ್ಚಿನ ಸಂಖ್ಯೆಯ ಬಸ್ ಗಳನ್ನು ಬಿಟ್ಟಲ್ಲಿ ಸಮಸ್ಯೆ ಪರಿಹಾರವಾಗುತ್ತದೆ. ಶಾಲಾ ಕರ್ತವ್ಯಕ್ಕೆ ಪ್ರತಿದಿನ ಓಡಾಡುವ ಶಿಕ್ಷಕರ ಜೊತೆಗೆ ಸಾಮಾನ್ಯ ಪ್ರಯಾಣಿಕರೂ ಬಸ್ ಗಳನ್ನು ಅವಲಂಬಿಸಿರುವುದರಿಂದ,  ಕೆಲವೇ ಕೆಲವು ಬಸ್‌ಗಳ ಓಡಾಟದಿಂದ ಅನನುಕೂಲವಾಗುತ್ತದೆ. ಸಂಬಂಧಿಸಿದವರು ಈ ಬಗ್ಗೆ ಸೂಕ್ತ ಗಮನ ಹರಿಸಿ ಸಮಸ್ಯೆ ಪರಿಹರಿಸುವರೆಂದು ಆಶಿಸುತ್ತೇವೆ.


– ಮಂಜುಳಾ ಪ್ರಸಾದ್, ದಾವಣಗೆರೆ.