ಜಿಲ್ಲೆಯಲ್ಲಿ 672 ಸೋಂಕಿತರು ಪತ್ತೆ

ದಾವಣಗೆರೆ, ಮೇ 6 – ಜಿಲ್ಲೆಯಲ್ಲಿ ಗುರುವಾರ 672 ಕೊರೊನಾ ಸೋಂಕಿತರು ಪತ್ತೆಯಾ ಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 2,930ಕ್ಕೆ ತಲುಪಿದೆ.

ಇದೇ ದಿನ 273 ಜನರು ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಗಳೂರಿನ 44 ವರ್ಷದ ಮಹಿಳೆ, ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆಯ 60 ವರ್ಷದ ಮಹಿಳೆ ಹಾಗೂ ದಾವಣಗೆರೆಯ ಪಿ.ಜೆ. ಬಡಾವಣೆಯ 64 ವರ್ಷದ ಮಹಿಳೆ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 356, ಹರಿಹರದಲ್ಲಿ 133, ಜಗಳೂರಿನಲ್ಲಿ 24, ಚನ್ನಗಿರಿಯಲ್ಲಿ 71, ಹೊನ್ನಾಳಿಯಲ್ಲಿ 63 ಹಾಗೂ ಹೊರ ಜಿಲ್ಲೆಗಳ 25 ಜನರು ಸೋಂಕಿತರಾಗಿದ್ದಾರೆ.