ಸಾವಿನಲ್ಲಿ ಒಂದಾದ ತಂದೆ-ಮಗಳು

ದಾವಣಗೆರೆ, ಮೇ 1 – ಕೊರೊನಾದಿಂದ ಮಗಳು ಸಾವಿಗೀಡಾದ ಬೆನ್ನಲ್ಲೇ, ತಂದೆ ಹೃದಯಾಘಾತದಿಂದ ನಿಧನರಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ನಗರದ ಶಿವಕುಮಾರಸ್ವಾಮಿ ಬಡಾವಣೆಯ ಮಂಜುನಾಥ್ ಹಾಗೂ ಮದುವೆಯಾದ ನಂತರ ಬೆಂಗಳೂರಿನಲ್ಲಿ ನೆಲೆಸಿರುವ ಪುತ್ರಿ ಕೆ.ಎ. ಪೂಜಾ ಸಾವನ್ನಪ್ಪಿದವರಾಗಿದ್ದಾರೆ.

ಪೂಜಾ ಕೊರೊನಾಗೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ರಾತ್ರಿ 11 ಗಂಟೆಗೆ ಅವರು ನಿಧನರಾಗಿದ್ದಾರೆ. ಪುತ್ರಿಯ ಸಾವಿನ ಸುದ್ದಿ ತಂದೆಗೆ ತಿಳಿಸಿರಲಿಲ್ಲ. ಶುಕ್ರವಾರ ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ತಂದೆ ಮಂಜುನಾಥ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಈ ಸಾವುಗಳು ಅವರ ಕುಟುಂಬ ಸದಸ್ಯರಿಗೆ ದೊಡ್ಡ ಆಘಾತ ತಂದಿವೆ. ಮಂಜುನಾಥ್, ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕಳೆದ 30 ವರ್ಷಗಳಿಂದ ಬಸ್ ಏಜೆಂಟ್‍ರಾಗಿ ಕೆಲಸ ಮಾಡುತ್ತಿದ್ದರು.