ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ

ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ

ಜಗಳೂರಿನಲ್ಲಿ ಎಚ್.ಕೆ. ರಾಮಚಂದ್ರಪ್ಪ ಅಭಿಮತ

ಜಗಳೂರು, ಏ.18- ದೇಶದಲ್ಲಿನ ಜಾತಿ, ಧರ್ಮ, ಭಾಷೆ ರಹಿತವಾಗಿ   ಶೋಷಿತರ, ಬಡ ಕಾರ್ಮಿಕರ  ಧ್ವನಿಯಾಗಿ  1920 ರಿಂದ ಎಐಟಿಯುಸಿ ಸಂಘಟನೆ ಜನಪರ ಹೋರಾಟ ನಡೆಸುತ್ತಾ, ಶತಮಾನೋತ್ಸವದ ಹಾದಿಯಲ್ಲಿ  ಸಾಗಿದ್ದು, ಸಂಘಟಿತ ಹೋರಾಟದ ಫಲವಾಗಿ ಕಾರ್ಮಿಕರಿಗೆ ಸೌಲಭ್ಯ, ಜೀವನ ಭದ್ರತೆ ಲಭಿಸಿವೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.

ಪಟ್ಟಣದ ಪ್ರೇರಣ ಚರ್ಚ್‌ ಸಭಾಂಗಣದಲ್ಲಿ ಶನಿವಾರ ಎಐಟಿಯುಸಿ ವತಿಯಿಂದ ಹಮ್ಮಿಕೊಂಡಿದ್ದ 5ನೇ  ಸಮ್ಮೇಳನವನ್ನು  ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿನ ಆಡಳಿತ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿದ್ದು,  ಕಾರ್ಮಿಕ ವಿರೋಧಿ ಮಸೂದೆಗಳನ್ನು ಜಾರಿಗೊ ಳಿಸುವ ಮೂಲಕ  ರೈತ ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುವ ಹುನ್ನಾರ‌ ನಡೆಸುತ್ತಿವೆ. ನ್ಯಾಯಯುತ  ಹಕ್ಕುಗಳಿಗಾಗಿ  ಒಕ್ಕೊರಲಿನ ತೀವ್ರ ಸ್ವರೂಪದ ಚಳುವಳಿ ರೂಪಿಸುವ ಅನಿವಾರ್ಯತೆ ಇದೆ ಎಂದು ಅವರು ಕರೆ ನೀಡಿದರು.

ವೇದ, ಉಪನಿಷತ್ತು, ಧರ್ಮ ಗ್ರಂಥಗಳಿಗಿಂತ ಶ್ರೇಷ್ಠವಾಗಿರುವ ಮನುಕುಲದ ಏಕತೆ ಸಾರುವ  ದೇಶದ ಪವಿತ್ರ ಗ್ರಂಥ  ಸಂವಿಧಾನದ ಉಳಿವಿಗಾಗಿ ಪ್ರತಿಯೊಬ್ಬರೂ ಪಣತೊಡಬೇಕಿದೆ. ಅಂಬೇಡ್ಕರ್ ಅವರು ಏಷ್ಯಾದಲ್ಲಿಯೇ ಹಲವು  ಉನ್ನತ ಶಿಕ್ಷಣ ಪದವಿ ಪಡೆದವರು. ಅಲ್ಲದೆ ಬ್ರಿಟೀಷರಿಂದ ಭಾರ ತೀಯರನ್ನು ರಕ್ಷಿಸಿದ   ನ್ಯಾಯವಾದಿ, ಅರ್ಥ ಶಾಸ್ತ್ರಜ್ಞ, ಸಮಾಜ ಸುಧಾರಕರರಾಗಿದ್ದರು. ಭಾರತ ರತ್ನ ಬಾಬಾ ಸಾಹೇಬರನ್ನು  ಒಂದು ಜಾತಿಗೆ ಸೀಮಿ ತಗೊಳಿಸಬಾರದು. ಪ್ರತಿಯೊಬ್ಬರೂ ಅವರ ವಿಚಾ ರಧಾರೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ವಕೀಲ ಶ್ರೀನಿವಾಸ್ ಶುಭ ಕೋರಿ, ದೇಶದಲ್ಲಿ ಎಡಪಂಥೀಯ ಸಂಘಟನೆಗಳ ಚಳುವಳಿಗಳು ವೈಚಾರಿಕತೆ ಮನೋಭಾವನೆ ಬೆಳೆಸುತ್ತವೆ. ಹಿಂದೂ ಮೂಲಭೂತವಾದಿಗಳಿಂದ ಶೋಷಣೆ ಮುಕ್ತರನ್ನಾಗಿಸಿದ್ದು  ನಮ್ಮ ಸಂವಿಧಾನ ಎಂದರು.

ಫಾದರ್ ವಿಲಿಯಂ ಮಿರಾಂದ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಬಳ್ಳಾರಿ ಜಿಲ್ಲಾ ಎಐಟಿಯುಸಿ  ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಲಕ್ಷ್ಮಣ, ಸಹ ಕಾರ್ಯದರ್ಶಿ ಶಾರದಮ್ಮ, ತಾಲ್ಲೂಕು ಅಧ್ಯಕ್ಷ ಮಹಮ್ಮದ್ ಬಾಷ, ಪದಾಧಿಕಾರಿ ಗಳಾದ ವಿಶಾಲಾಕ್ಷಿ, ವೀರಣ್ಣ ಮಾದಿಹಳ್ಳಿ, ಕೆ.ಮಂಜಪ್ಪ, ಚನ್ನಮ್ಮ, ಸುಶೀಲಮ್ಮ, ಹಾಲಮ್ಮ, ನಾಗರತ್ನಮ್ಮ, ಭರಮಕ್ಕ, ಗೌರಮ್ಮ, ತಿಪ್ಪೇಸ್ವಾಮಿ, ಮೀನಾಕ್ಷಿ ಬಸವಣ್ಯಮ್ಮ ಇನ್ನಿತರರಿದ್ದರು.