ಜಿಗಳಿಯಲ್ಲಿ ಭೂಮಿ ಸಂರಕ್ಷಣಾ ಅಭಿಯಾನ

ಜಿಗಳಿಯಲ್ಲಿ ಭೂಮಿ ಸಂರಕ್ಷಣಾ ಅಭಿಯಾನ

ಮಲೇಬೆನ್ನೂರು, ಏ.15- ಭೂಮಿಯ ಸುಪೋಷಣೆ ಹಾಗೂ ಸಂರಕ್ಷಣೆಗೋಸ್ಕರ ರಾಷ್ಟ್ರಮಟ್ಟದ ಜನ ಅಭಿಯಾನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ  ಮಂಗಳವಾರ ಜಿಗಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರಣ ಮುದ್ದಣ್ಣ ಸಾವಯವ ಕೃಷಿ ಪರಿವಾರದ ರೈತರು ತಮ್ಮ ಹೊಲಗಳಿಂದ ತಂದಿದ್ದ ಮಣ್ಣನ್ನು ಒಂದು ಕಡೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ಹಾಗೂ ಮಣ್ಣಿನ ಮಹತ್ವ ಹಾಗೂ ಸಂರಕ್ಷಣೆ ಕುರಿತು ತಿಳಿಸಲಾಯಿತು.

ಪರಿವಾರದ ಮಮತಾ ಶಿವರಾಜ್, ವಿದ್ಯಾ ಗೌಡ್ರ ಬಸವರಾಜಪ್ಪ, ಶಕುಂತಲಮ್ಮ ಶಿವನಗೌಡ, ಶಾರದಮ್ಮ ರುದ್ರಯ್ಯ, ಹೇಮಕ್ಕ ಶಿವಾನಂದಪ್ಪ ಮತ್ತು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ. ದೇವೇಂದ್ರಪ್ಪ, ಮಾಜಿ ಉಪಾಧ್ಯಕ್ಷ ಗೌಡ್ರ ಬಸವರಾಜಪ್ಪ, ಗ್ರಾ.ಪಂ. ಸದಸ್ಯ ಎನ್.ಎಂ. ಪಾಟೀಲ್, ಹಾಲಯ್ಯ, ಅಸಳ್ಳಿ ದೇವೇಂದ್ರಪ್ಪ, ಬಿ. ಸೋಮಶೇಖ ರಾಚಾರಿ, ಎಕ್ಕೆಗೊಂದಿ ನಾಗರಾಜ್, ಜಿ. ಬೇವಿನಹಳ್ಳಿ ಹುಲ್ಲತ್ತಿ ರುದ್ರಗೌಡ, ಜಯ್ಯಪ್ಪ, ಮಲ್ಲೇಶ್ ಇನ್ನಿತರರು ಭಾಗವಹಿಸಿದ್ದರು.

ಇದೇ ರೀತಿಯ ಕಾರ್ಯಕ್ರಮಗಳನ್ನು ಕುಂಬಳೂರು, ನಿಟ್ಟೂರು, ಕೊಮಾರನಹಳ್ಳಿ, ಯಲವಟ್ಟಿ, ಬುಳ್ಳಾಪುರ, ಕೊಂಡಜ್ಜಿ ಮತ್ತು ಹೊಳೆಸಿರಿಗೆರೆಯಲ್ಲಿ ಆಚರಿಸಲಾಯಿತು. ಕೊಮಾರನಹಳ್ಳಿಯ ರಂಗನಾಥ ಆಶ್ರಮದಲ್ಲಿ ಇದೇ ದಿನಾಂಕ 26 ರಂದು ಹರಿಹರ ತಾಲ್ಲೂಕು ಮಟ್ಟದ ಅಭಿಯಾನವನ್ನು ಶರಣ ಮುದ್ದಣ್ಣ, ಸಾವಯವ ಕೃಷಿ ಪರಿವಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕುಂಬಳೂರಿನ ಎ.ಎನ್. ಆಂಜನೇಯ ತಿಳಿಸಿದ್ದಾರೆ.