ಹೊನ್ನಾಳಿ : ಮಲ್ಲದೇವರ ಕಟ್ಟೆಯಲ್ಲಿ 13 ಜೋಡಿಗಳ ವಿವಾಹ

ಹೊನ್ನಾಳಿ : ಮಲ್ಲದೇವರ ಕಟ್ಟೆಯಲ್ಲಿ 13 ಜೋಡಿಗಳ ವಿವಾಹ

ಹೊನ್ನಾಳಿ, ಏ.5-  ತಾಲ್ಲೂಕಿನ ಮಲ್ಲದೇವರಕಟ್ಟೆ ಗ್ರಾಮದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ನೂತನವಾಗಿ 13 ಜೋಡಿಗಳ ಸಾಮೂಹಿಕ ಮದುವೆ  ನಡೆಯಿತು.

ಮಲ್ಲೇಶ್ವರ ಸ್ವಾಮಿಯ 23ನೇ ವರ್ಷದ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಸಮಾರಂಭ ಹಾಗೂ ಧರ್ಮ ಸಭೆಯ ಸಾನ್ನಿಧ್ಯವನ್ನು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.

ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಅರಬಗಟ್ಟೆ, ಸುಂಕದಕಟ್ಟೆ, ಹೆಚ್. ಕಡದಕಟ್ಟೆ ಹಾಗೂ ಹೊನ್ನಾಳಿ ಸುತ್ತ ಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.