ಜಿಗಳಿ : ಪುಣ್ಯಾನಂದ ಪುರಿ ಶ್ರೀಗಳ ಪುಣ್ಯಾರಾಧನೆ

ಜಿಗಳಿ : ಪುಣ್ಯಾನಂದ ಪುರಿ ಶ್ರೀಗಳ ಪುಣ್ಯಾರಾಧನೆ

ಮಲೇಬೆನ್ನೂರು, ಏ.4- ಜಿಗಳಿ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಥಮ ಗುರುಗಳಾದ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಅವರ 14ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವನ್ನು ಶನಿವಾರ ಸಂಜೆ ನಡೆಸಲಾಯಿತು.

ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಗ್ರಾಮದ ಮುಖಂಡರು, ಶ್ರೀಗಳು ಸಮುದಾಯದ ಮಹಾಬೆಳಕು ಎಂದು ಸ್ಮರಿಸಿದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ದೇವೇಂದ್ರಪ್ಪ, ನಿಟ್ಟೂರಿನ ಮುಖಂಡ ಕೆ.ಸಂಜೀವಮೂರ್ತಿ, ಗ್ರಾಮದ ಕೆ.ನಂದಿಬಸಪ್ಪ, ಕೆ.ಷಣ್ಮುಖಪ್ಪ, ಕೆ.ಈರಣ್ಣ, ಗ್ರಾ.ಪಂ. ಸದಸ್ಯರಾದ ಕೆ.ಜಿ.ಬಸವರಾಜ್, ವೈ.ಆರ್.ಚೇತನ್‌ಕುಮಾರ್, ಜಿ.ಆರ್.ಹಾಲೇಶ್‌ಕುಮಾರ್, ಮಾಕನೂರು ಶಿವು, ಮುಖಂಡರಾದ ಕೆ.ಎಸ್.ನಂದ್ಯೆಪ್ಪ, ಕೆ.ಎಂ.ರಾಮಪ್ಪ, ಕೆ.ಆರ್.ಸಿದ್ದವೀರಪ್ಪ, ಬಿ.ಸೋಮಶೇಖರ ಚಾರಿ, ಬಿ.ನಿಂಗಾಚಾರಿ, ಭೋವಿ ಮಂಜಪ್ಪ, ಕಮದೋಡ ಬಸಪ್ಪ, ಹಾಲಿವಾಣದ ಚಂದ್ರಪ್ಪ, ಪುಟ್ಟಣ್ಣರ ಬಸವರಾಜ್, ಶಿಕ್ಷಕ ಜಿ.ಆರ್.ನಾಗರಾಜ್, ಉಪನ್ಯಾಸಕ ಕೆ.ಎನ್.ಮಂಜುನಾಥ್, ಪತ್ರಕರ್ತ ಪ್ರಕಾಶ್, ಗ್ರಾ.ಪಂ. ಬಿಲ್ ಕಲೆಕ್ಟರ್ ಬಿ.ಮೌನೇಶ್, ಹೆಚ್.ಬಿ.ವೀರೇಶ್, ಬೆಣ್ಣೇರ ನಂದ್ಯೆಪ್ಪ, ಪಾಳ್ಯದರ ನಂದಿಬಸಪ್ಪ, ದಡದಿ ನಾಗಣ್ಣ, ವಿಶ್ವ, ಬಾರಿಕೆರೆ ಉಮೇಶ್, ಚಾಮರಾಜ ಸೇರಿದಂತೆ ಇನ್ನೂ ಅನೇಕರು  ಕಾರ್ಯಕ್ರಮದಲ್ಲಿ ಭಾಗವಹಿಸಿ, ಲಿಂಗೈಕ್ಯ ಶ್ರೀಗಳಿಗೆ ಪೂಜೆ ಸಲ್ಲಿಸಿದರು.