ಸುವರ್ಣ ಭಾರತಿ ಸಂಸ್ಥೆಯಿಂದ ಮಹಿಳಾ ದಿನಾಚರಣೆ

ಸುವರ್ಣ ಭಾರತಿ ಸಂಸ್ಥೆಯಿಂದ ಮಹಿಳಾ ದಿನಾಚರಣೆ

ದಾವಣಗೆರೆ, ಏ. 2- ನಗರದ ಯೋಗ ಮಂದಿರದಲ್ಲಿ ಸುವರ್ಣ ಭಾರತಿ ಮಹಿಳಾ ಸಂಸ್ಥೆಯಿಂದ ಮಹಿಳಾ ದಿನಾಚರಣೆ ಆಚರಿಸಲಾಯಿತು. ಹಿರಿಯ ವೈದ್ಯರಾದ ಶಾಂತಾ ಭಟ್ ಅವರು ಪರಿಸರ ರಕ್ಷಣೆಯ ಬಗ್ಗೆ (ತ್ಯಾಜ್ಯ) ಬಹು ಸೂಕ್ತ ಮಾಹಿತಿ ನೀಡಿದರು. 

ಉಪನ್ಯಾಸಕಿ ಸುಮತಿ ಜಯಪ್ಪ, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಭಾರತಿ ಕೇಶವಮೂರ್ತಿ, ಸಂಗೀತ ಶಿಕ್ಷಕಿ ವಿಜಯ ಶ್ರೀಧರ್ ಮತ್ತು ಪಿಎಸ್ಐ ಜಯಶೀಲ, ಗಿರಿಜಾ, ದಿವ್ಯ ಪ್ರಶಾಂತ್, ಶಿಲ್ಪ ಜೈನ್ ಹಾಗೂ ಪುಷ್ಪ ಸಿದ್ದೇಶ್ ಉಪಸ್ಥಿತರಿದ್ದರು. ವಿಜಯ ವೀರೇಂದ್ರ  ನಿರೂಪಿಸಿದರು. ವಿಜಯ ಹಳಕಟ್ಟಿ ಸ್ವಾಗತಿಸಿದರು. ಸುಧಾ ಗುರುಬಸಪ್ಪ, ಲತಾ ಮಂಜುನಾಥ ಪ್ರಾರ್ಥಿಸಿದರು. ಸಂಸ್ಥೆಯ ಖಜಾಂಚಿ ಪುಷ್ಪ ನಾರಾಯಣಸ್ವಾಮಿ ವಂದಿಸಿದರು.