ಮೆಗಾ ಲೋಕ್‍ ಅದಾಲತ್ : 273 ಪ್ರಕರಣಗಳು ಇತ್ಯರ್ಥ

ಮೆಗಾ ಲೋಕ್‍ ಅದಾಲತ್ : 273 ಪ್ರಕರಣಗಳು ಇತ್ಯರ್ಥ

ಜಗಳೂರು, ಮಾ.27- ಇಂದು ನಡೆದ ಮೆಗಾ ಅದಾಲತ್‌ನಲ್ಲಿ, ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಒಟ್ಟು 273 ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ ಹಾಗೂ ಒಟ್ಟು 70,63,506 ರೂ. ಮೊತ್ತ ರಾಜೀ ಸಂಧಾನದ ಮೂಲಕ  ಕಕ್ಷಿದಾರರು ಪಡೆದಿರುತ್ತಾರೆ. 

ಸದರಿ ಇತ್ಯರ್ಥವಾದ ಒಟ್ಟು ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಒಟ್ಟು 256 ಪ್ರಕರಣಗಳು ಇತ್ಯರ್ಥಗೊಡಿರುತ್ತವೆ. ಹಾಗೂ ಒಟ್ಟು 63,19,686 ರೂ. ಸಂಬಂಧಿಸಿದ ಕಕ್ಷಿದಾರರಿಗೆ ಸಂದಾಯವಾಗಿರುತ್ತದೆ. ಹಣದ ವಸೂಲಾತಿ ಪ್ರಕರಣಗಳು ಒಟ್ಟು 5 ರಾಜಿಯಾಗಿದ್ದು, 9,23,820 ರೂ. ಮೊತ್ತವನ್ನು ಸಂಬಂಧಿಸಿದ ಕಕ್ಷಿದಾರರು ಪಡೆದಿರುತ್ತಾರೆ. 

ಪಾಲು ವಿಭಾಗ ಕೋರಿ ಸಲ್ಲಿಸಿದ 01 ಪ್ರಕರಣ, 03 ನಿರ್ದಿಷ್ಟ ಪರಿಹಾರ ಕೋರಿ ಸಲ್ಲಿಸಿದ ಪ್ರಕರಣಗಳು  ಮತ್ತು ಚೆಕ್‍ ಬೌನ್ಸ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ 14 ಪ್ರಕರಣಗಳು ರಾಜಿಯಾಗಿರುತ್ತವೆ. ಇದರೊಂದಿಗೆ 37,29,466 ರೂ.  ಚೆಕ್‌ಬೌನ್ಸ್ ಪ್ರಕರಣಗಳಲ್ಲಿ ಸಂದಾಯವಾಗುವುದರೊಂದಿಗೆ ರಾಜಿಯಾಗಿರುತ್ತದೆ. ನ್ಯಾಯಾಲಯದಲ್ಲಿ ಬಾಕಿ ಇರುವ ಬ್ಯಾಂಕ್‍ನ ಹಣ ವಸೂಲಾತಿಗೆ ಸಂಬಂಧಿಸಿದ 02 ಪ್ರಕರಣಗಳು ರಾಜಿಯಾಗಿದ್ದು, ಇದರಲ್ಲಿ ಒಟ್ಟು 3,85,000 ರೂ.ಸದರಿ ಬ್ಯಾಂಕ್‌ಗೆ ಗೆ ಸಂದಾಯವಾಗಿರುತ್ತದೆ. 

ಜೀವನಾಂಶ ಕೋರಿ ಸಲ್ಲಿಸಿದ್ದ 2 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಇದರಲ್ಲಿ ಒಂದು ಪ್ರಕರಣದ ಯುವ ದಂಪತಿ ಮನಸ್ತಾಪ ಮರೆತು, ಸುಖ ದಾಂಪತ್ಯ ನಡೆಸುತ್ತೇವೆ ಎಂದು ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿರುತ್ತದೆ. 

ಮುಂದುವರೆದು ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಬಿಐ, ಜಗಳೂರು ಬ್ಯಾಂಕ್‌ಗಳ 9 ಪ್ರಕರಣಗಳು ಇತ್ಯರ್ಥಗೊಂಡಿದ್ದು ಒಟ್ಟು 7,24,500 ರೂ. ಸದರಿ ಬ್ಯಾಂಕ್‌ಗೆ ಜಮೆಯಾಗಿರುತ್ತದೆ. ಬಿಎಸ್‌ಎನ್‌ಎಲ್‌ನ 7 ಪ್ರಕರಣಗಳು ಇತ್ಯರ್ಥಗೊಂಡಿದ್ದು ಸದರಿ ಸಂಸ್ಥೆಗೆ 19,320 ರೂ.ಸಂದಾಯವಾಗಿರುತ್ತದೆ.

 ನ್ಯಾಯವಾದಿಗಳು, ಕಾನೂನು ಸೇವಾ ಸಮಿತಿ, ಪೊಲೀಸ್‍ ಇಲಾಖೆ, ಸಹಾಯಕ ಸರ್ಕಾರಿ ಅಭಿಯೋಜಕರು,  ಎಸ್‌ಬಿಐ  ಬ್ಯಾಂಕ್, ಬಿಎಸ್ಸೆನ್ನೆಲ್ ಸಂಸ್ಥೆಯ ಹಾಗೂ ಕಕ್ಷಿದಾರರ ಇಚ್ಛಾಶಕ್ತಿ ಮತ್ತು ಸಹಕಾರದಿಂದ ಈ ದಿನದ ಮೆಗಾ ಲೋಕ್‌ ಅದಾಲತ್‍ ಯಶಸ್ವಿಯಾಗಿರುತ್ತದೆ.