ಮಾಸ್ಕ್‍ ಹಾಕದವರಿಗೆ ದಂಡ

ಮಾಸ್ಕ್‍ ಹಾಕದವರಿಗೆ ದಂಡ

ಮಲೇಬೆನ್ನೂರು, ಮಾ.27 – ಪಟ್ಟಣದಲ್ಲಿ ಮಾಸ್ಕ್‍ ಧರಿಸದವರಿಗೆ  ಪುರಸಭೆಯವರು ದಂಡ ಹಾಕಿ, ಅರಿವು ಮೂಡಿಸಿದರು. ಇಲ್ಲಿನ ಪುರಸಭೆ ಮುಂಭಾಗದ ಹೆದ್ದಾರಿಯಲ್ಲಿ ಮಾಸ್ಕ್‍ ಇಲ್ಲದೆ ಸಂಚರಿಸುತ್ತಿದ್ದ ಬೈಕ್‍ ಸವಾರರಿಗೆ, ಆಟೋ ಪ್ರಯಾಣಿಕರಿಗೆ 100 ರೂ ದಂಡ ಹಾಕಿ, ಹೊಸ ಮಾಸ್ಕ್‍ ಕೊಟ್ಟು ಕಳುಹಿಸಿದರು. ಮಾಸ್ಕ್ ಹಾಕದ ಪಾದಚಾರಿಗಳಿಗೆ ಎಚ್ಚರಿಕೆ ನೀಡಿ ಉಚಿತವಾಗಿ ಮಾಸ್ಕ್‍ ನೀಡಿದರು. ಆಶಾ ಕಾರ್ಯಕರ್ತೆಯರು ಮಾಸ್ಕ್‍ ಧರಿಸದೆ ಪುರಸಭೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದರು, ಅವರಿಗೂ ದಂಡ ಹಾಕಲಾಯಿತು. ಕೆಲವರು ದಂಡ ಹಾಕುತ್ತಿರುವುದನ್ನು ನೋಡಿ ಮಾರ್ಗ ಬದಲಿಸಿ, ತಪ್ಪಿಸಿಕೊಂಡರು, ಸೋಮವಾರದಿಂದ ಮತ್ತಷ್ಟು ಬಿಗಿ ಮಾಡುವುದಾಗಿ ಪ್ರಭಾರ ಮುಖ್ಯಾಧಿಕಾರಿ ದಿನಕರ್‍ ` ಜನತಾವಾಣಿ’ ಗೆ ತಿಳಿಸಿದರು.

ಪುರಸಭೆ ಅಧಿಕಾರಿಗಳಾದ ಉಮೇಶ್, ಪ್ರಭು, ಶಿವಯೋಗಿ, ನವೀನ್‍, ಪರಶುರಾಮ್‍, ಚಿತ್ರಪ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿದ್ದರು.