ನಾಯಕನಹಟ್ಟಿ ರಥೋತ್ಸವ : ಒಳಮಠ, ಹೊರಮಠದಲ್ಲಿ ಎಸ್ಸೆಸ್ ಪೂಜೆ ಸಲ್ಲಿಕೆ

ನಾಯಕನಹಟ್ಟಿ ರಥೋತ್ಸವ : ಒಳಮಠ, ಹೊರಮಠದಲ್ಲಿ ಎಸ್ಸೆಸ್ ಪೂಜೆ ಸಲ್ಲಿಕೆ

ಜಗಳೂರು, ಮಾ.27- ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ತಿಪ್ಪೇಸ್ವಾಮಿ ರಥೋತ್ಸವ ಶಾಸ್ತ್ರೋಕ್ತವಾಗಿ ನಡೆಯಲಿದ್ದು, ಇಂದು ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ನಾಯಕನಹಟ್ಟಿಯ ಒಳಮಠ ಮತ್ತು ಹೊರಮಠದಲ್ಲಿ ಪೂಜೆ ಸಲ್ಲಿಸಿದರು.

ದೇವಸ್ಥಾನ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಬಿ.ವಾಲಿ, ನಾಯಕನಹಟ್ಟಿ ಪುರಸಭೆಯ ಮುಖ್ಯಾಧಿಕಾರಿ ಕೋಡಿ ಭೀಮರಾಯ, ದೇವಸ್ಥಾನ ಸಮಿತಿಯ ಅಧ್ಯಕ್ಷ ಜೆ.ಪಿ.ರವಿಶಂಕರ್ ಅವರುಗಳು, ಎಸ್ಸೆಸ್ ಅವರನ್ನು ಸ್ವಾಗತಿಸಿ, ಸನ್ಮಾನಿಸಿದರು.

ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ರಥೋತ್ಸವದ ಬಳಿ ತೆರಳಿ ಎಸ್ಸೆಸ್ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಅಥಣಿ ಎಸ್.ವೀರಣ್ಣ, ಎಸ್.ಕೆ.ವೀರಣ್ಣ, ಕುರುಡಿ ಗಿರೀಶ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ಹರೀಶ್ ಕೆ.ಎಲ್.ಬಸಾಪುರ, ಸುರಭಿ ವಿನಯ್, ನಿಖಿಲ್, ಸ್ಥಳೀಯ ಮುಖಂಡರು ಗಳಾದ ವಿಎಸ್ಎಸ್ ಮಾಜಿ ಅಧ್ಯಕ್ಷ ಕಾಟಯ್ಯ, ನೆರಲ ಕೆರೆ ತಿಪ್ಪೇಸ್ವಾಮಿ, ನೆರಲಕೆರೆ ಜಿಲಾನಿ, ಮತ್ತಿತರರಿದ್ದರು.