ಕೊಮಾರನಹಳ್ಳಿ: ದೇವಸ್ಥಾನ ಹುಂಡಿಯಲ್ಲಿ 1,74,920 ಸಂಗ್ರಹ

ಮಲೇಬೆನ್ನೂರು, ಮಾ.27- ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಕಾಣಿಕೆ ಹುಂಡಿಯನ್ನು ತೆರೆದು ಎಣಿಕೆ ಮಾಡಲಾಯಿತು.

19 ತಿಂಗಳ ನಂತರ ತೆರೆದ ಕಾಣಿಕೆ ಹುಂಡಿಯಲ್ಲಿ 1,74,920 ರೂ. ಸಂಗ್ರಹವಾಗಿದ್ದು, ಸಂಗ್ರಹವಾದ ಮೊತ್ತವನ್ನು ಕೆನರಾ ಬ್ಯಾಂಕ್‌ನಲ್ಲಿರುವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಖಾತೆಗೆ ಜಮೆ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿಗಳೂ ಆದ ತಹಶೀಲ್ದಾರ್ ಆರ್. ರವಿ ತಿಳಿಸಿದ್ದಾರೆ. 2019 ಜೂನ್ ತಿಂಗಳಲ್ಲಿ ಇದೇ ಹುಂಡಿಯಲ್ಲಿ 2,36,535 ರೂ. ಕಾಣಿಕೆ ಸಂಗ್ರಹವಾಗಿತ್ತು. ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆ ಇತ್ಯಾದಿ ಕಾರ್ಯಕ್ರಮಗಳು ರದ್ದಾದ ಕಾರಣ ಸಂಗ್ರಹ ಕಡಿಮೆಯಾಗಿದೆ ಎನ್ನಲಾಗಿದೆ. 

ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಕೊಟ್ರೇಶ್, ಬೋರಯ್ಯ, ಶ್ರೀಧರಮೂರ್ತಿ, ಅಣ್ಣಪ್ಪ, ಸೌಮ್ಯ, ಮಂಜುಳಾ, ಮುಜರಾಯಿ ಶಾನಭೋಗ್ ಎಂ.ಡಿ. ಧರ್ಮರಾಜ್, ಅರ್ಚಕರಾದ ಮಂಜುನಾಥ್, ಗುರುರಾಜಚಾರ್, ಕೆನರಾ ಬ್ಯಾಂಕ್ ಅಧಿಕಾರಿಗಳಾದ ಕಾರ್ತಿಕ್, ಮಂಜುನಾಥ್, ಗ್ರಾಮ ಸಹಾಯಕರಾದ ಸುಜಾತ, ಪ್ರದೀಪ್, ಸಂತೋಷ್, ಅಂಜಿನಪ್ಪ, ರಾಮಪ್ಪ, ಜೈ ಮಾರುತಿ, ಟಿ. ಮಾರುತಿ, ಶಶಿ ಕುಮಾರ್, ಗುಳದಹಳ್ಳಿ ರಾಜು ಮತ್ತಿತರರು ಎಣಿಕೆಯಲ್ಲಿ ಪಾಲ್ಗೊಂಡಿದ್ದರು.

ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್, ರಾಘವೇಂದ್ರ ಕುಲಕರ್ಣಿ, ವಾದಿರಾಜ್, ವೆಂಕಟೇಶ್, ಅಮರನಾಥ ಜೋಯಿಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.