ಕೋವಿಡ್ ಅಪಾಯ ತಪ್ಪಿಸಲು ಸಹಕರಿಸಿ

ಕೋವಿಡ್ ಅಪಾಯ ತಪ್ಪಿಸಲು ಸಹಕರಿಸಿ

ಜಗಳೂರು,ಮಾ. 26- 60 ವರ್ಷ ಮೇಲ್ಪಟ್ಟ ಹಿರಿಯರು  ಹಾಗೂ ಗಂಭೀರ ಆರೋಗ್ಯ ಸಮಸ್ಯೆಯುಳ್ಳ 45 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತರಾಗಿ  ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಜಾಗೃತರಾಗಿ ಎರಡನೇ ಬಾರಿ ಕೋವಿಡ್ ಆಕ್ರಮಣದ  ಅಪಾಯವನ್ನು  ತಪ್ಪಿಲು ಸಹಕಾರ ನೀಡಬೇಕು ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಕರೆ ನೀಡಿದರು.

ಪಟ್ಟಣದ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಕರೆದಿದ್ದ  ಕೋವಿಡ್ ಲಸಿಕೆ ಪಡೆಯುವ  ಕುರಿತ    ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾರ್ಚ್ 1 ರಿಂದ  ಉಚಿತವಾಗಿ ಅರ್ಹರಿಗೆ‌ ಲಸಿಕೆ ನೀಡಲಾಗುತ್ತಿದೆ‌. ಶೀಘ್ರವಾಗಿ ಅಗತ್ಯ ದಾಖಲೆ ಸಲ್ಲಿಸಿ ನೋಂದಣಿ ಮಾಡಿಸಿ ಲಸಿಕೆ ಪಡೆಯುವಂತೆ ಸಲಹೆ ನೀಡಿದರು.

ಕೋವಿಡ್‌ನಿಂದ ಸಂಪೂರ್ಣ ಮುಕ್ತಿ ಸಿಗದೆ  ಪ್ರಕರಣಗಳು ಏರುಗತಿಯಲ್ಲಿ ಉಲ್ಬಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಾನದಂಡಗಳನ್ನು ವಿವಾಹ, ಜನ್ಮ ದಿನ, ಅಂತ್ಯ ಸಂಸ್ಕಾರ, ಜಾತ್ರೆ ಇತರೆ ಸಭೆ ಆಚರಣೆ ಸಮಾರಂಭ ಗಳಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸಿ ಎರಡನೇ ಅಲೆಯ ಕೋವಿಡ್ ಮಹಾಮಾರಿ ಆಕ್ರಮಣ ನಿಯಂತ್ರಿಸಲು   ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ ಕೊವಿಡ್ 19 ನಿಯಮಗಳನ್ನು ಉಲ್ಲಂಘಿಸಿ ಮಾಸ್ಕ್ ಧರಿಸದೇ ಇದ್ದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ  ರೂ.100 ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ. ನಾಗವೇಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗರಾಜ್, ಪ.ಪಂ. ಉಪಾಧ್ಯಕ್ಷೆ ಲಲಿತಾ ಶಿವಣ್ಣ, ಸದಸ್ಯರಾದ ದೇವರಾಜ್, ರೇವಣ್ಣ, ರವಿ, ಶಕೀಲ್ ಅಹಮ್ಮದ್, ಪಾಪಲಿಂಗಪ್ಪ, ರಮೇಶ್, ನಾಮನಿರ್ದೇಶಿತ ಸದಸ್ಯ ರುದ್ರಮುನಿ, ಪ.ಪಂ.  ಕಂದಾಯ ನಿರೀಕ್ಷಕ ಸಂತೋಷ್, ಆರೋಗ್ಯ ನಿರೀಕ್ಷಕ ಖಿಫಾಯತ್ ಇನ್ನಿತರರಿದ್ದರು.