ಮಾನವೀಯ ಮೌಲ್ಯಗಳಿಂದ ಮನುಷ್ಯತ್ವಕ್ಕೆ ಬೆಲೆ

ಪಿಎಸ್ಐ ಸುರೇಶ್

ಕೂಡ್ಲಿಗಿ, ಮಾ.13- ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸಲು ಮಾನವೀಯ ಮೌಲ್ಯಗಳು ಅವಶ್ಯಕವಾಗಿದ್ದು, ಇದನ್ನು ಅಳವಡಿಸಿಕೊಂಡಲ್ಲಿ ಮನುಷ್ಯತ್ವಕ್ಕೂ ಉನ್ನತ ಬೆಲೆ ಸಿಕ್ಕಂತಾಗುತ್ತದೆ ಎಂದು ಕೂಡ್ಲಿಗಿ ಪಿಎಸ್ಐ ಡಿ. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸವಿತಾ ಸಮಾಜ ಹಾಗೂ ಭಗತ್ ಸಿಂಗ್ ಸಂಘಟನೆ ಪದಾಧಿಕಾರಿಗಳು ಆಯೋಜಿ ಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಮ್ಮ ಪೊಲೀಸ್ ಕರ್ತವ್ಯದ  ವ್ಯಾಪ್ತಿಯಲ್ಲಿ  ಸಾರ್ವಜನಿಕರೊಂದಿ ಗಿನ ಜನಸ್ನೇಹಿ ಸಂಬಂಧ ಬೆಳೆಸಿಕೊಂಡು  ಕಾನೂನು, ನೀತಿ, ನಿಯಮ ಪಾಲನೆ ಜೊತೆಗೆ  ಜನತೆಗೆ ಅಪರಾಧ ತಡೆ ಇತ್ಯಾದಿಗಳ ಅರಿವು ಮೂಡಿಸಬೇಕಿದೆ ಎಂದರು.

ಸವಿತಾ ಸಮಾಜದ ಪದಾಧಿಕಾರಿಗಳಾದ ನಾಗರಾಜ, ಸುಧಾಕರ್, ಡಾ.ವೆಂಕಟೇಶ್,  ಶ್ರೀಶೈಲ ವಿದ್ಯಾಸಂಸ್ಥೆಯ ವಾಗೀಶ, ಕೂಡ್ಲಿಗಿ  ಪ.ಪಂ. ಸದಸ್ಯ ಸಚಿನ್‌ ಕುಮಾರ್ ಇನ್ನಿತರರು ಮಾತನಾಡಿದರು. ನಿವೃತ್ತ ಯೋಧರಾದ ಮೇಘ ರಾಜ್ ಹಾಗೂ ಅಜೇಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಗತ್ ಸಿಂಗ್ ಸಂಘಟನೆಯ ವೃಷಭೇಂದ್ರ ಹಾಗೂ ಮತ್ತಿತರರಿದ್ದರು.