ರಾಷ್ಟ್ರೀಯ ದಲಿತ ಸಂಘದ ಹೊನ್ನಾಳಿ ತಾಲ್ಲೂಕು ಘಟಕ ಉದ್ಘಾಟನೆ

ರಾಷ್ಟ್ರೀಯ ದಲಿತ ಸಂಘದ  ಹೊನ್ನಾಳಿ ತಾಲ್ಲೂಕು ಘಟಕ ಉದ್ಘಾಟನೆ

ಹೊನ್ನಾಳಿ, ಮಾ.7- ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಷ್ಟ್ರೀಯ ದಲಿತ ಸಂಘಟನೆಯ ತಾಲ್ಲೂಕು ಘಟಕದ ಉದ್ಘಾಟನೆ ನೆರವೇರಿತು. ರಾಷ್ಟ್ರೀಯ ಉಪಾಧ್ಯಕ್ಷ ಎಸ್. ಪವನ್‌ಕುಮಾರ್ ಉದ್ಘಾಟನೆ ನೆರವೇರಿಸಿದರು. ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ನಾಯಕ್, ರಾಜ್ಯ ಯುವ ಘಟಕದ ಅಧ್ಯಕ್ಷ ಲಕ್ಷ್ಮಣ ಕಾಂಟ್ರಿತ್ ಮಾತನಾಡಿದರು.

ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಮೋಹಿತ್ ನರಸಿಂಹ ಮೂರ್ತಿ, ಮಹಿಳಾ ಘಟಕದ ಕಾರ್ಯದರ್ಶಿ ಹರ್ಷಿತ, ಸಂದೇಶ್ ನಾಯಕ್, ಉಮಾಶಂಕರ್, ದಾವಣಗೆರೆ ರುದ್ರೇಶ್, ಹೊನ್ನಾಳಿ ಅಧ್ಯಕ್ಷ ರಾಜು, ನ್ಯಾಮತಿ ಅಧ್ಯಕ್ಷ ಶಿವರಾಜ್, ಎಸ್. ಉಮೇಶ್, ಅಣ್ಣಪ್ಪ, ನಗರ ಘಟಕದ ಅಧ್ಯಕ್ಷ ವಸಂತ, ಹಾನಗಲ್ ಬಸವರಾಜ್, ನಾಗಪ್ಪ, ಹಿರೇಕೆರೂರು ಸುರೇಶ್ ತಳವಾರ್, ಸೊರಬ ಪ್ರದೀಪ್, ಅನಂತಪುರ ಲಿಂಗರಾಜ್, ಶಿವಮೊಗ್ಗ ಆನಂದ್, ಚಳ್ಳಕೆರೆ ಮನೋಜ್ ಸೇರಿದಂತೆ ನಾಲ್ಕು ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published.