ಹಾಲೇಶ್ ಗೌಡ ಕಾಂಗ್ರೆಸ್‌ ಸೇರ್ಪಡೆ

ಹಾಲೇಶ್ ಗೌಡ ಕಾಂಗ್ರೆಸ್‌ ಸೇರ್ಪಡೆ

ಹರಿಹರ, ಫೆ.22 – ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯರೂ ಆದ ಮಾಜಿ ಶಾಸಕ ಶಿವಶಂಕರ್ ಅವರ ಬೆಂಬಲಿಗ ಜೆಡಿಎಸ್‌ನ ಹಾಲೇಶ್ ಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ದಾವಣಗೆರೆಯಲ್ಲಿ ಇಂದು ಸಂಜೆ ನಡೆದ ಸರಳ ಸಮಾರಂಭದಲ್ಲಿ ಹಾಲೇಶ್ ಗೌಡ ಅವರನ್ನು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಹರಿಹರ ಶಾಸಕ ಎಸ್.ರಾಮಪ್ಪ ಪಕ್ಷದ ಚಿಹ್ನೆ ಧ್ವಜ ಹಾಗೂ ಶಾಲನ್ನು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

ಇದೇ ವೇಳೆ ಜೆಡಿಎಸ್ ಮುಖಂಡ, ದಲಿತ ನಾಯಕ ಎಂ.ಡಿ.ನಾಗರಾಜ್ ಅವರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಟಿ.ಜೆ.ಮುರುಗೇಶ್, ಹರಿಹರ ತಾ.ಪಂ. ಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ್, ಎಲ್.ಬಿ.ಹನುಮಂತಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಜಿ.ಶಾಂತರಾಜ್, ಹನಗವಾಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹನುಮಂತಪ್ಪ, ಮುಖಂಡರುಗಳಾದ ಸಾರಥಿ ಉಮೇಶ್, ಗುತ್ತೂರು ಪೈಲ್ವಾನ್ ಬಸಪ್ಪ, ಗಂಗಪ್ಪ, ದಂಡೆಪ್ಪ, ಕೊಂಡಜ್ಜಿ ವಿಜಯಕುಮಾರ್, ಮಾರುತಿ, ಶ್ರೀನಿವಾಸ್ ಚಿನ್ನಿಕಟ್ಟೆ, ಕೋಮಲ್ ಜೈನ್, ಜವಳಿ ಪಾರ್ಕ್‍ ವಿಶ್ವನಾಥ್, ಶ್ರೀನಿವಾಸ್, ಯಶವಂತರಾವ್, ಬಿ. ಪ್ರವೀಣ್ ಕುಮಾರ್, ಶ್ರೀಕಾಂತ್ ಬಗರೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.