ರಾಜ್ಯ ರೋಲರ್‌ ಸ್ಕೇಟಿಂಗ್‌ಗೆ ಆಯ್ಕೆ

ರಾಜ್ಯ ರೋಲರ್‌ ಸ್ಕೇಟಿಂಗ್‌ಗೆ ಆಯ್ಕೆ

ದಾವಣಗೆರೆ, ಫೆ.22- ಮೈಸೂರಿನಲ್ಲಿ ನಡೆಯಲಿರುವ 36ನೇ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ಗೆ ನಗರದಿಂದ ಸ್ಕೇಟರ್‌ಗಳು ಆಯ್ಕೆಯಾಗಿದ್ದಾರೆ.

5 ರಿಂದ 7ನೇ ವಯಸ್ಸಿನ ಬಾಲಕರ ವಿಭಾಗದಲ್ಲಿ ಸಾತ್ವಿಕ್ ನಾಯಕ್ ಎನ್. ಪ್ರಥಮ, ಶ್ರೇಯಸ್ ಕಲ್ಲಾಪುರ್ ದ್ವಿತೀಯ, 7 ರಿಂದ 9 ವಯಸ್ಸಿನ ಬಾಲಕಿಯರ ವಿಭಾಗದಲ್ಲಿ ಹೆಚ್.ಎಸ್. ದಿಷಿತಾ ಪ್ರಥಮ ಮತ್ತು ಫಲಕ್ ನಿಗಾರ್ ದ್ವಿತೀಯ, ಬಾಲಕರ ವಿಭಾಗದಲ್ಲಿ ಶಾಶ್ವತ್ ವಿಶ್ವಕರ್ಮ ಪ್ರಥಮ, ಅಭಯ್ ಪಾಟೀಲ್ ದ್ವಿತೀಯ ಹಾಗೂ
11 ರಿಂದ 14 ನೇ ವಯಸ್ಸಿನ ಬಾಲಕರ ವಿಭಾಗದಲ್ಲಿ ವಿ.ಜೆ. ಅಭಿರಾಮ್ ಪ್ರಥಮ, ದೈವಿಕ್ ನಾಯಕ್ ಎನ್. ದ್ವಿತೀಯ ಹಾಗೂ ಎ. ತಾರೇಶ್ ತೃತೀಯ ಸ್ಥಾನ ಗಳಿಸಿದ್ದಾರೆ.

14 ರಿಂದ 17 ವಯಸ್ಸಿನ ಬಾಲಕಿಯರ ವಿಭಾಗದಲ್ಲಿ ಟಿ.ಎನ್. ಸ್ನೇಹ ಪ್ರಥಮ, ಬಾಲಕರ ವಿಭಾಗದಲ್ಲಿ ಟಿ. ಹರಿ ಕಾರ್ತಿಕ್ ಪ್ರಥಮ, ಆರ್ಯನ್ ಆದಿತ್ಯ ದ್ವಿತೀಯ, ಮನೋಜ್ ಮತ್ತೂರ್ ತೃತೀಯ ಸ್ಥಾನ ಪಡೆದು 36ನೇ ರಾಜ್ಯ ಮಟ್ಟಕ್ಕೆ 30 ವರ್ಷ ಮೇಲ್ಪಟ್ಟ ಪುರುಷರ (ಮಾಸ್ಟರ್) ವಿಭಾಗದಲ್ಲಿ ಎ.ಜಿ. ಮಧು ಆಯ್ಕೆಯಾಗಿದ್ದಾರೆ ಎಂದು ನ್ಯೂ ದಾವಣಗೆರೆ ಡಿಸ್ಟ್ರಿಕ್ಟ್ ರೋಲರ್ ಸ್ಟೇಟಿಂಗ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ನಿರಂಜನ ಬಾಬು ತಿಳಿಸಿದ್ದಾರೆ.

ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಸ್ಕೇಟರ್‌ಗಳು ಮಾರ್ಚ್ 31 ರಿಂದ ಏಪ್ರಿಲ್ 10 ರ ವರೆಗೆ ಚಂಢೀಘಡದ ಮೊಹಾಲಿಯಲ್ಲಿ ನಡೆಯಲಿಕುವ 58ನೇ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.

Leave a Reply

Your email address will not be published.