ನೊಳಂಬ ಲಿಂಗಾಯತ ಸಂಘದ ಚುನಾವಣೆ: 2 ಸ್ಥಾನಗಳಿಗೆ ಐವರು ಕಣದಲ್ಲಿ

ಮಲೇಬೆನ್ನೂರು, ಫೆ.23 –  ನೊಳಂಬ ಲಿಂಗಾಯತ ಸಂಘದ ಕೇಂದ್ರ ಸಮಿತಿಯ ನಿರ್ದೇಶಕರ ಸ್ಥಾನಗಳಿಗೆ ಇದೇ ದಿನಾಂಕ 28 ರಂದು ಚುನಾವಣೆ ನಡೆಯಲಿದ್ದು, ದಾವಣಗೆರೆ ಜಿಲ್ಲೆಯ 2 ಸ್ಥಾನಗಳಿಗೆ  ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬೆಂಗಳೂರಿನ ನೊಳಂಬ ಲಿಂಗಾಯಿತ ಸಂಘವು ಸ್ಥಾಪನೆಯಾಗಿ ಸುಮಾರು 40 ವರ್ಷಗಳನ್ನು ಪೂರೈಸಿದ್ದು, ಇದುವವರೆಗೂ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿರಲಿಲ್ಲ ಎನ್ನಲಾಗಿದೆ.

5 ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗಾಗಿ ಈ ಬಾರಿ ತೀವ್ರ ಪೈಪೋಟಿ ಇದ್ದು, ದಾವಣಗೆರೆ ಜಿಲ್ಲೆಯಿಂದ ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ, ಜಿಗಳಿಯ ಇಂದೂಧರ್‍, ಎನ್.ರುದ್ರಗೌಡ, ಜಿ.ಬೇವಿನಹಳ್ಳಿ ಬಿ.ಕೆ. ಮಹೇಶ್ವರಪ್ಪ, ಹೊನ್ನಾಳಿ ತಾಲ್ಲೂಕಿನ ಮಾದೇನಹಳ್ಳಿಯ ಜಿ ರುದ್ರೇಗೌಡ, ದಾವಣಗೆರೆಯ ನಿವೃತ್ತ ಎಇಇ ಈಶ್ವರಪ್ಪ ಅವರು ಆಯ್ಕೆಗಾಗಿ ಪ್ರಯತ್ನ ನಡೆಸಿದ್ದಾರೆ.

ಈ ಹಿಂದೆ ದಾವಣಗೆರೆ ಜಿಲ್ಲೆಯಿಂದ ನಿವೃತ್ತ ಡಿವೈಎಸ್ಪಿ ಎಸ್‍.ಎನ್.ಕರೇಗೌಡ, ಮಲೇಬೆನ್ನೂರಿನ ಎಂ.ಕರಿಬಸಯ್ಯ, ಮಾದೇ ನಹಳ್ಳಿಯ ಜಿ.ರುದ್ರೇಗೌಡ, ಜಿ. ಬೇವನ ಹಳ್ಳಿಯ ಬಿ.ಕೆ. ಮಹೇಶ್ವರಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಜಗಳಿ ಇಂದೂಧರ್‍ ಅವರು 3 ವರ್ಷಗಳಿಂದ ಕಾರ್ಯನಿರ್ವಹಿಸಿದ್ದಾರೆ.

ಮಾದೇನಹಳ್ಳಿ ರುದ್ರೇಗೌಡ 4 ನೇ ಬಾರಿಗೆ ಮತ್ತು ಬೇವಿನಹಳ್ಳಿ ಮಹೇಶ್ವರಪ್ಪ 3ನೇ ಬಾರಿಗೆ ಆಯ್ಕೆ ಬಯಸಿ ಸ್ಪರ್ಧಿಸಿದ್ದರೆ, ಡಾ.ಡಿ.ಬಿ.ಗಂಗಪ್ಪ, ಜಿಗಳಿ ಇಂದೂಧರ್‍ ಈಶ್ವರಪ್ಪ ಅವರು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದಾರೆ. 

ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 825 ಮತದಾರರಿದ್ದು, ಹರಿಹರ, ಹೊನ್ನಾಳಿ, ನ್ಯಾಮತಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾರರು ಇದ್ದಾರೆ.

ಇದೇ ದಿನಾಂಕ 28 ರಂದು ದಾವಣ ಗೆರೆಯ ಲಿಟಲ್ ಚಾಂಪ್ಸ್ ಗುರುಕುಲದಲ್ಲಿ ಈ ಚುನಾವಣೆ ನಡೆಯಲಿದೆ.

Leave a Reply

Your email address will not be published.