ಸ್ಥಳೀಯ ವಿದ್ಯಾನಗರ-ವಿನಾಯಕ ಬಡಾವಣೆಯ ವಿನೂತನ ಮಹಿಳಾ ಸಮಾಜದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 17 ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಜಾನಪದ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಅಂದು ಕರ್ನಾಟಕ ಜಾನಪದ ನೃತ್ಯ ಸ್ಪರ್ಧೆಯನ್ನೂ ಸಹ ಏರ್ಪಡಿಸಲಾಗಿದೆ.
ಶಾಮನೂರು ಆಂಜನೇಯ ದರ್ಶನ ಪಡೆದ ಸರ್ಜಾ
ನಗರದ ಹೈಸ್ಕೂಲ್ ಮೈದಾನದಲ್ಲಿ ಸಂಜೆ ಆಡಿಯೋ ರಿಲೀಸ್ ಗೂ ಮುನ್ನ ಆಂಜನೇಯನ ಪರಮ ಭಕ್ತರಾಗಿರುವ ಧ್ರುವ ಸರ್ಜಾ ಶಾಮನೂರಿನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಪೊಗರು ಸಿನಿಮಾದ ಯಶಸ್ಸಿಗೆ ಪ್ರಾರ್ಥಿಸಿದರು.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ
ಕಣಿವೆ ರಾಜ್ಯದ ಪುಲ್ವಾಮಾ ಬಳಿ 2019ರ ಫೆಬ್ರವರಿ14ರಂದು ಉಗ್ರರ ದಾಳಿಗೆ 40 ಮಂದಿ ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾಗಿ, 39 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು.
ಅವಕಾಶಗಳನ್ನು ಸದ್ವಿನಿಯೋಗಿಸಿಕೊಂಡು ಸಮಾಜಮುಖಿಯಾಗಿ ಬೆಳೆಯಬೇಕು
ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಅವಕಾಶಗಳಿರಲಿಲ್ಲ ಹಾಗೂ ಮನೆಯಿಂದ ಹೊರ ಬರುವ ಸ್ವಾತಂತ್ರ್ಯವೂ ಇರಲಿಲ್ಲ. ಆದರೀಗ ಕಾಲ ಬದಲಾಗಿದ್ದು, ಇರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವ ಜೊತೆಗೆ ಸಮಾಜಮುಖಿಯಾಗಿ ಬೆಳೆಯುವಂತೆ ಪೂರ್ಣಿಮಾ ಕರೆ ನೀಡಿದರು.
ಟಾಯ್ಕಾಥಾನ್-2021 : ಜಿ.ಎಂ.ಐ.ಟಿ ಪ್ರಾಜೆಕ್ಟ್ ಆಯ್ಕೆ
ಭಾರತ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ದಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಆಯೋಜಿಸಿರುವ ರಾಷ್ಟ್ರಮಟ್ಟದ ಟಾಯ್ಕಾ ಥಾನ್ – 2021 ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ನಗರದ ಜಿ.ಎಂ. ಐ.ಟಿ. ತಾಂತ್ರಿಕ ಮಹಾವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳ ತಂಡಗಳು ಮೊದಲನೇಯ ಸುತ್ತಿನಲ್ಲಿ ಆಯ್ಕೆಯಾಗಿರುತ್ತಾರೆ.
ಬೆಣ್ಣೆನಗರಿಯಲ್ಲಿ `ಪೊಗರು’ ಆಡಿಯೋ ಅದ್ಧೂರಿ ಬಿಡುಗಡೆ
ಆಕ್ಷನ್ ಪ್ರಿನ್ಸ್ ಬಿರುದು ಪಡೆದ ನಟ ಧ್ರುವ ಸರ್ಜಾ ಅವರ ನಟನೆಯ ಬೆಳ್ಳಿ ತೆರೆ ಮೇಲೆ ಬಿಡುಗಡೆಗೊಳ್ಳಲಿರುವ `ಪೊಗರು' ಸಿನಿಮಾದ ಆಡಿಯೋ ಬೆಣ್ಣೆನಗರಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು.
ಕೊಕ್ಕನೂರಿನಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ಆತ್ಮಾರ್ಪಣಾ ದಿನಾಚರಣೆ
ಮಲೇಬೆನ್ನೂರು : ಸಮೀಪದ ಕೊಕ್ಕನೂರು ಗ್ರಾಮದ ವಾಸವಿ ಯುವಜನ ಸಂಘ ಮತ್ತು ವಾಸವಿ ಮಹಿಳಾ ಸಂಘಗಳ ಆಶ್ರಯದಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ಆತ್ಮಾರ್ಪಣಾ ದಿನವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಮಕ್ಕಳ ಸ್ನೇಹಿ ಅಭಿಯಾನ ಎಲ್ಲಾ ಶಾಲೆಗಳಲ್ಲಿ ಅಳವಡಿಸಬೇಕು
ಹರಪನಹಳ್ಳಿ, : ಗ್ರಾಮ ಪಂಚಾಯತಿ ಮಕ್ಕಳ ಸ್ನೇಹಿ ಅಭಿಯಾನ ಕಾರ್ಯಕ್ರಮವನ್ನು ಎಲ್ಲಾ ಶಾಲೆಗಳಲ್ಲಿ ಅಳವಡಿಸಿದರೆ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರುತ್ತಾರೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಪ್ರಕಾಶ್ ಹೇಳಿದರು
ಪ್ರೊ. ಬಿ. ಕೃಷ್ಣಪ್ಪ ಹುಟ್ಟಿ ಬೆಳೆದ ಹರಿಹರದ ಮನೆಯನ್ನು ಸ್ಮಾರಕ ಮಾಡಬೇಕು
ಹರಿಹರ : ದೂರ ದೃಷ್ಟಿಯ ಕಲ್ಪನೆ, ಸಮಾಜಮುಖಿ ಆಲೋಚನೆ ಮೈಗೂಡಿಸಿಕೊಂಡಿದ್ದ ಪ್ರೊ. ಬಿ. ಕೃಷ್ಣಪ್ಪ ಅವರು ಶೋಷಿತರ ಶ್ರೇಯಸ್ಸಿಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಘಟನೆಯನ್ನು ಹುಟ್ಟು ಹಾಕಿದ ಸಮಾಜ ಚಿಂತಕರು
ಹಳ್ಳಿಗಳಿಗೆ ಹಗಲು ತ್ರೀ-ಫೇಸ್ನಲ್ಲಿ ವಿದ್ಯುತ್ ಪೂರೈಕೆಗೆ ಒತ್ತಾಯ
ಈ ಬಾರಿ ಉತ್ತಮ ಮಳೆಯಾಗಿ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ಕೊರತೆಯಿಲ್ಲ. ಆದರೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.