Day: February 14, 2021

Home 2021 February 14 (Sunday)
ನೂತನ ಕೈಗಾರಿಕಾ ನೀತಿ ಮಾದರಿಯಾಗಿದೆ
Post

ನೂತನ ಕೈಗಾರಿಕಾ ನೀತಿ ಮಾದರಿಯಾಗಿದೆ

ಉತ್ಪಾದನೆ, ತಂತ್ರಜ್ಞಾನ ಅಳವಡಿಕೆ, ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆ ಹಾಗೂ ರಫ್ತಿಗೆ ಉತ್ತೇಜನಗಳೆಂಬ ನಾಲ್ಕು ವಿಷಯಗಳಿಗೆ ಒತ್ತು ನೀಡಿ ನೂತನ ಕೈಗಾರಿಕಾ ನೀತಿ 2020-25 ರೂಪಿಸಲಾಗಿದ್ದು, ಈ ನೀತಿ ಬೇರೆ ರಾಜ್ಯಗಳಿಗೆ ಮಾದರಿಯಾಗುವಂತಿದೆ

22ನೇ ವಾರ್ಡ್ ಯಲ್ಲಮ್ಮ ನಗರಕ್ಕೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದ ಮೇಯರ್
Post

22ನೇ ವಾರ್ಡ್ ಯಲ್ಲಮ್ಮ ನಗರಕ್ಕೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದ ಮೇಯರ್

ಮಹಾನಗರ ವ್ಯಾಪ್ತಿಯ 22ನೇ ವಾರ್ಡ್ ಯಲ್ಲಮ್ಮ ನಗರದಲ್ಲಿ ಇದೇ ದಿನಾಂಕ 15ರ ಸೋಮವಾರ ಶ್ರೀ ಸಿದ್ಧಿ ವಿನಾಯಕ ಪ್ರಾಥಮಿಕ ಶಾಲೆಯಲ್ಲಿ ಮಹಾನಗರ ಪಾಲಿಕೆಯಿಂದ `ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ' ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಜಯ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. 

Post

ಕೆಎಸ್ಸಾರ್ಟಿಸಿ : ಹಿರಿಯ ನಾಗರಿಕರಿಗೆ ಶೇ.25ರಷ್ಟು ರಿಯಾಯಿತಿ ಸೌಲಭ್ಯ

ಕೋವಿಡ್-19 ಸೋಂಕಿನ ಹಿನ್ನೆ ಲೆಯಲ್ಲಿ ಹಿರಿಯ ನಾಗರಿಕರಿಗೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಶೇ.25ರಷ್ಟು ಪ್ರಯಾಣದರ ಸೌಲಭ್ಯವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಇದೀಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪತ್ರದನ್ವಯ ಈ ಸೌಲಭ್ಯ ವನ್ನು ಪುನಃ ಮುಂದುವರೆ ಸಬಹುದು. 

ಹರಿಹರದಲ್ಲಿ ರಸ್ತೆ ಸುರಕ್ಷತೆ, ಪೋಕ್ಸೋ ಕಾಯ್ದೆ ಕುರಿತು ಕಾರ್ಯಾಗಾರ
Post

ಹರಿಹರದಲ್ಲಿ ರಸ್ತೆ ಸುರಕ್ಷತೆ, ಪೋಕ್ಸೋ ಕಾಯ್ದೆ ಕುರಿತು ಕಾರ್ಯಾಗಾರ

ಹರಿಹರ : ಸ್ಥಳೀಯ ಸಂತ ಅಲೋಶಿ ಯಸ್ ಕಾಲೇಜು ಆಶ್ರಯದಲ್ಲಿ  ಜಿಲ್ಲಾ ಪೊಲೀಸ್ ಹಾಗೂ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಸಹಭಾಗಿತ್ವದಲ್ಲಿ ರಸ್ತೆ ಸುರಕ್ಷತೆ ಹಾಗೂ ಪೋಕ್ಸೋ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ದೊಡ್ಡ – ದೊಡ್ಡ ಸಮಾಜಗಳ ಹೋರಾಟಗಳಿಂದ ಮೀಸಲಾತಿಗೆ ಬೆಲೆ ಇಲ್ಲದಂತಾಗಿದೆ
Post

ದೊಡ್ಡ – ದೊಡ್ಡ ಸಮಾಜಗಳ ಹೋರಾಟಗಳಿಂದ ಮೀಸಲಾತಿಗೆ ಬೆಲೆ ಇಲ್ಲದಂತಾಗಿದೆ

ಹರಪನಹಳ್ಳಿ : ಪರಿಶಿಷ್ಟ ಜಾತಿ, ಪಂಗಡ, 2ಎ ಮೀಸಲಾತಿಗೆ ದೊಡ್ಡ ದೊಡ್ಡ ಸಮಾಜದವರು ಹೋರಾಟ ಮಾಡುತ್ತಿರುವುದನ್ನು ನೋಡಿದರೆ ಮೀಸಲಾತಿಗೆ ಬೆಲೆ ಇಲ್ಲದಂತಾಗಿದೆ ಎಂದು ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಅಧ್ಯಕ್ಷ ಮಲ್ಲಿಕಾರ್ಜುನ ಮಾನ್ಪಡೆ ಹೇಳಿದರು.

Post

ಕೇಂದ್ರದಿಂದ ಐತಿಹಾಸಿಕ ಬಜೆಟ್‌ ಮಂಡನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವೆ ನಿರ್ಮಲ ಸೀತಾರಾಮನ್‌ ಮಂಡಿಸಿದ ಬಜೆಟ್‌ ಜನಪರವಾಗಿದ್ದು, ದೇಶದ ಆರ್ಥಿಕತೆ ಹೆಚ್ಚಳ ಮಾಡುವಲ್ಲಿ ಪೂರಕವಾಗಿದೆ.

ಶಿವಾಜಿ ಜಯಂತ್ಯೋತ್ಸವ : ಕ್ರೀಡೆ – ಯೋಗಾಸನ
Post

ಶಿವಾಜಿ ಜಯಂತ್ಯೋತ್ಸವ : ಕ್ರೀಡೆ – ಯೋಗಾಸನ

394ನೇ ವರ್ಷದ ಶಿವಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವದ ಅಂಗವಾಗಿ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ವಿವಿಧ ಕ್ರೀಡಾ ಹಾಗೂ ಯೋಗಾಸನ ಸ್ಪರ್ಧೆಗಳನ್ನು  ಇಂದಿಲ್ಲಿ ನಡೆಸುವುದರೊಂದಿಗೆ ಶಿವಾಜಿ ಮಹಾರಾಜ್ ಅವರ ಜಯಂತಿಯನ್ನು ಅರ್ಥಪೂರ್ಣ ಮತ್ತು ನೆನಪುಳಿಯುವಂತೆ ಆಚರಿಸಲಾಯಿತು.

Post

ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಖಚಿತ : ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ವಾಮದೇವಪ್ಪ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸುವುದು ಖಚಿತವಾಗಿದ್ದು, ಹಾಲಿ ಅಧ್ಯಕ್ಷ ಡಾ. ಹೆಚ್‌.ಎಸ್‌. ಮಂಜುನಾಥ ಕುರ್ಕಿ ಅವರು ತಮ್ಮ ಪರ ಇರುತ್ತಾರೆಂಬ ವಿಶ್ವಾಸ ತಮ್ಮದಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅವಮಾನ ಸಹಿಸಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ ಫುಲೆ
Post

ಅವಮಾನ ಸಹಿಸಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ ಫುಲೆ

ರಾಣೇಬೆನ್ನೂರು : ಮಾನಸಿಕ ಹಾಗೂ ದೈಹಿಕವಾಗಿ  ಹಿಂಸೆ, ಅವಮಾನ, ದೌರ್ಜನ್ಯ ಎಲ್ಲವನ್ನು ಸಹಿಸಿಕೊಂಡು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಯಶಸ್ಸು ಗಳಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಅಭಿಪ್ರಾಯಪಟ್ಟರು.