ಸೂರಗೊಂಡನಕೊಪ್ಪದಲ್ಲಿ ನಾಡಿದ್ದು ದಿನಾಂಕ 14 ಮತ್ತು 15 ರಂದು ಜರುಗಲಿರುವ ಬಂಜಾರ ಸಮುದಾಯ ಜಗದ್ಗುರು ಶ್ರೀ ಸೇವಾಲಾಲ್ ಮಹಾರಾಜರ 282ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಭಕ್ತರು ಪಾದಯಾತ್ರೆ ಮೂಲಕ ಸಾಗಿದರು.
ಸಿಪಿಐ ಬಾಲಚಂದ್ರಗೆ ರಾಷ್ಟ್ರಪತಿ ಪದಕ
ಚಿತ್ರದುರ್ಗ : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತಾಧಿಕಾರಿ ಬಾಲಚಂದ್ರ ನಾಯ್ಕ್ ಅವರಿಗೆ ರಾಷ್ಟ್ರಪತಿ ಪದಕ ಲಭಿಸಿದೆ.
ಹಿಲ್ಸೈಡ್ ವೈದ್ಯರಾಗಿ ಅಂಜುಂ-ಭೂಮಿಕಾ ಆಯ್ಕೆ
ಹರಪನಹಳ್ಳಿ : ಬೆಂಗಳೂರಿನ ಹಿಲ್ಸೈಡ್ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡಿದ್ದ ತಾಲ್ಲೂಕಿನ ಇಬ್ಬರು ಯುವತಿಯರು ಅದೇ ಸಂಸ್ಥೆಯಲ್ಲಿ ವೈದ್ಯರಾಗಿ ಆಯ್ಕೆಯಾಗಿದ್ದಾರೆ
ಕದಳಿ ಕಮ್ಮಟದಲ್ಲಿ ದತ್ತಿ ಉಪನ್ಯಾಸ
ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದಿಂದ 121ನೇ ಕಮ್ಮಟವನ್ನು ವಾಟ್ಸಾಪ್ ನಲ್ಲಿ ಆಯೋಜಿಸಲಾಗಿತ್ತು.
ಶಿವಕುಮಾರಸ್ವಾಮಿ ಕ್ರೆಡಿಟ್ ಸೊಸೈಟಿಗೆ ಕರಿಬಸಪ್ಪ ಅಧ್ಯಕ್ಷ, ಸ್ವಾಮಿ ಉಪಾಧ್ಯಕ್ಷ
ಶ್ರೀ ಶಿವಕುಮಾರಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಅಧ್ಯಕ್ಷರಾಗಿ ಜಿ. ಕರಿಬಸಪ್ಪ ಮತ್ತು ಉಪಾಧ್ಯಕ್ಷರಾಗಿ ಶಿವಶಂಕರಸ್ವಾಮಿ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ನಗರದಲ್ಲಿ ರಾಮಾರ್ಜುನ ಚಿತ್ರತಂಡ
ನಾಯಕ ನಟ ಅನೀಶ್ ನಟಿಸಿ ನಿರ್ದೇಶಿಸಿ ಮತ್ತು ನಿರ್ಮಿಸಿರುವ ರಾಮಾರ್ಜುನ ಚಲನಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡದೊಂದಿಗೆ ನಗರಕ್ಕೆ ಆಗಮಿಸಿದ್ದರು.
ಡಿಸಿಎಂ ಕೆಳ ಸೇತುವೆ ನಿರ್ಮಾಣದ ನಷ್ಟ ತುಂಬಲು ಸಂಸದರಿಗೆ ಶಾಸ್ತ್ರಿ ಒತ್ತಾಯ
ನಗರದ ಡಿಸಿಎಂ ಕಾಟನ್ ಮಿಲ್ ಬಳಿ ಕೆಳ ಸೇತುವೆ ನಿರ್ಮಿಸಿ ರುವ ಸಂಸದರು ಸುಮಾರು 12 ಕೋಟಿ ರೂ.ಗಳಷ್ಟು ನಷ್ಟ ಉಂಟು ಮಾಡಿದ್ದಾರೆ.
ರಾಣೇಬೆನ್ನೂರಿನಲ್ಲಿ ನಾಳೆ ಸಿದ್ಧಾರೂಢರ ರಥೋತ್ಸವ
ರಾಣೇಬೆನ್ನೂರು : ಸ್ಥಳೀಯ ಶ್ರೀ ಸಿದ್ಧಾರೂಢ ಮಠದಲ್ಲಿ 21 ನೇ ವೇದಾಂತ ಪರಿಷತ್ ಹಾಗೂ 7 ನೇ ವರ್ಷದ ಶ್ರೀ ಸಿದ್ಧಾರೂಢರ ರಥೋತ್ಸವವು ನಾಡಿದ್ದು ದಿನಾಂಕ 14 ರಿಂದ 16 ರವರೆಗೆ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಮಲ್ಲಯ್ಯಜ್ಜ ತಿಳಿಸಿದ್ದಾರೆ.
ಹೆಬ್ಬಾಳು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ: ಚಾಲಕ ಪಾರು
ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಹೆಬ್ಬಾಳ್ ಗ್ರಾಮದ ಹೊರ ಭಾಗದ ರಾಷ್ಡ್ರೀಯ ಹೆದ್ದಾರಿ-4ರ ಶಿವ ಡಾಬಾದ ಹತ್ತಿರ ಇಂದು ನಡೆದಿದೆ.
ವೈದ್ಯ ಪದ್ಧತಿಗಳನ್ನು ಮಿಶ್ರಗೊಳಿಸುವ ಕೇಂದ್ರದ ಹುನ್ನಾರಕ್ಕೆ ಐಎಂಎ ವಿರೋಧ
ಹರಿಹರ : ಸಿ.ಸಿ.ಐ.ಎಂ. (ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸನ್) ನ ಇತ್ತೀಚಿನ ಆದೇಶದಲ್ಲಿ ಶಲ್ಯತಂತ್ರದ ಆಯುರ್ವೇದ ಸ್ನಾತಕೋತ್ತರ ಕೋರ್ಸ್ಗಳಿಗೆ ಎಂಎಸ್ (ಜನರಲ್ ಸರ್ಜರಿ) ಎಂಬ ನಾಮಾಂಕಿತವನ್ನು ನೀಡಿರುವುದನ್ನು ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಶಾಖೆ ತೀವ್ರವಾಗಿ ಖಂಡಿಸಿದೆ.