ಹರಪನಹಳ್ಳಿ ತಾಲ್ಲೂಕಿನ ಗಣಿತ ಶಿಕ್ಷಕರ ಸಂಘ ಅಸ್ತಿತ್ವಕ್ಕೆ ಬಂದಿದೆ. ಅಧ್ಯಕ್ಷರಾಗಿ ತಿಪ್ಪೇರುದ್ರಪ್ಪ, ಉಪಾಧ್ಯಕ್ಷರಾಗಿ ಲತಾ ರಾಥೋಡ್, ಗೌರವ ಅಧ್ಯಕ್ಷರಾಗಿ ವಾಮದೇವಪ್ಪ ಆಯ್ಕೆಯಾಗಿದ್ದಾರೆ.
ಎಸ್.ಎಸ್.ಎಫ್. ಅಧ್ಯಕ್ಷರಾಗಿ ಖಾದರ್ ಬಾಷಾ
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಎಸ್ಎಫ್) ಅಧ್ಯಕ್ಷ ರಾಗಿ ಖಾದರ್ ಬಾಷಾ, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಹಮೀದ್ ನೇಮಕಗೊಂಡಿದ್ದಾರೆ.
ಕಸ್ತೂರಿ ಬಾ ಸಮಾಜದಿಂದ ಸಮವಸ್ತ್ರ ವಿತರಣೆ
ನಗರದ ಕಸ್ತೂರಿ ಬಾ ಸಮಾಜದಿಂದ ಮಾರುತಿ ಪ್ರೌಢಶಾಲಾ ಮಕ್ಕಳಿಗೆ ಈಚೆಗೆ ಸಮವಸ್ತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ನಗರಕ್ಕೆ ವೀರಶೈವ ಸಭಾದ ಉಮೇಶ್ ಪಾಟೀಲ್ ಭೇಟಿ
ಅಖಿಲ ಭಾರತ ವೀರಶೈವ ಮಹಾಸಭಾ ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ರಾಷ್ಟ್ರೀಯ ಅಧ್ಯಕ್ಷ ಉಮೇಶ್ ಹೆಚ್. ಪಾಟೀಲ್ ಅವರು ನಿನ್ನೆ ನಗರಕ್ಕೆ ಭೇಟಿ ನೀಡಿದ್ದರು.
ಅತ್ತಿಗೆರೆಯಲ್ಲಿ ಪಠ್ಯಪುಸ್ತಕ ವಿತರಣೆ
ಅತ್ತಿಗೆರೆಯ ಶ್ರೀಮತಿ ಚನ್ನಪ್ಳ ಶಿವಲಿಂಗಪ್ಪ ಗುರುಬಸಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು.
ಪುಟ್ಟರಾಜ ಗುರುಕುಲದಿಂದ ಸಂಗೀತ
ನಗರದ ಪುಟ್ಟರಾಜ ಗಾನ ಗುರುಕುಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಸುಗಮ ಸಂಗೀತ, ರಂಗಗೀತೆಗಳ ಸಂಗೀತ ಸಂಭ್ರಮ ಸಮಾರಂಭವು ನಗರದ ರೋಟರಿ ಬಾಲಭವನದಲ್ಲಿ ಕಳೆದ ವಾರ ನಡೆಯಿತು.
ಆಯುರ್ವೇದಕ್ಕೆ ಅಭೂತಪೂರ್ವ ಭವಿಷ್ಯ : ಶ್ರೀ ತ್ಯಾಗೀಶ್ವರಾನಂದಜೀ
ನಗರದ ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಔಷಧಿ ಸಸ್ಯಗಳ ನೆಡುವಿಕೆ ಕಾರ್ಯಕ್ರಮವು ನಿನ್ನೆ ನಡೆಯಿತು.
ಗುಳೇದ ಲಕ್ಕಮ್ಮ ದೇವಿ ದೇವಸ್ಥಾನ ಶೀಘ್ರ ಪೂರ್ಣ
ಹರಪನಹಳ್ಳಿ ತಾಲ್ಲೂಕಿನ ಹುಲಿಕಟ್ಟಿ ಗ್ರಾಮದ ಶಕ್ತಿ ದೇವತೆ, ಅಸಂಖ್ಯಾತ ಭಕ್ತರ ಆರಾಧ್ಯ ದೈವ ಗುಳೇದ ಲಕ್ಕಮ್ಮ ದೇವಿ ದೇವಸ್ಥಾನದ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂಬರುವ ಆಗಸ್ಟ್ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡು ದೇವಸ್ಥಾನ ಉದ್ಘಾಟನೆ ಹಾಗೂ ದೇವಿ ಮೂರ್ತಿ ಪ್ರತಿಷ್ಟಾಪಿಸಲಾಗುವುದು
ಅಸಂಘಟಿತರೆಂದು ಘೋಷಿಸಲು ಪುರೋಹಿತರು – ಅರ್ಚಕರ ಮನವಿ
ಖಾಸಗಿ ದೇವಾಲಯಗಳಲ್ಲಿ ಹಾಗೂ ಪೌರೋಹಿತ್ಯ ನಡೆಸುವ ವೃತ್ತಿಪರ ಪುರೋಹಿತರು ಮತ್ತು ಅರ್ಚಕರನ್ನು ಅಸಂಘಟಿತ ಕಾರ್ಮಿಕರೆಂದು ಘೋಷಿಸಿ, ಸರ್ಕಾರದ ಅಧಿಕೃತ ಗುರುತಿನ ಚೀಟಿ ನೀಡಿ ಸರ್ಕಾರಿ ಸೌಲಭ್ಯಗಳನ್ನು ದೊರಕಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕೂಡ್ಲಿಗಿಯಲ್ಲಿ ಜೋಡಿ ಕೊಲೆ ಪ್ರಕರಣ : ಶರಣಾದ ಆರೋಪಿ
ಕೂಡ್ಲಿಗಿ : ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಕೂಡ್ಲಿಗಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.