ಕುಂದುವಾಡ ಕೆರೆ ಹೂಳನ್ನು ರೈತರು ಪಡೆಯಬಹುದು

ದಾವಣಗೆರೆ, ಫೆ.1- ನಗರದ ಕುಂದುವಾಡ ಕೆರೆಯಲ್ಲಿ ಸ್ಮಾರ್ಟ್‌ಸಿಟಿ ಲಿ. ವತಿಯಿಂದ ಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಕೆರೆಯಲ್ಲಿನ ಹೂಳನ್ನು ತೆಗೆಯಲಾಗುತ್ತಿದೆ. ಆಸಕ್ತ ರೈತರು ತಮ್ಮ ಜಮೀನಿಗೆ ಅಗತ್ಯವಾದ ಹೂಳನ್ನು ತೆಗೆದುಕೊಂಡು ಹೋಗಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ.