ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದಿಂದ `ಸಂಸ್ಕಾರ ಸೌರಭ’ ಪುಸ್ತಕ ಲೋಕಾರ್ಪಣೆ

ದಾವಣಗೆರೆ, ಜ.26- ನಗರದ ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ಆಶ್ರಯದಲ್ಲಿ ಜ್ಯೋತಿಷಿಯೂ ಆಗಿರುವ ಪತ್ರಿಕಾ ಅಂಕಣಕಾರ  ಡಾ. ಸಿ.ಕೆ.ಆನಂದತೀರ್ಥಾಚಾರ್‌ ಅವರು ಸಂಗ್ರಹಿಸಿ ಬರೆದಿರುವ ಸಂಸ್ಕಾರಗಳ ಹಿನ್ನೆಲೆ ಮತ್ತು ಮುಹೂರ್ತ ಭಾಗದ `ಸಂಸ್ಕಾರ ಸೌರಭ’ ಪುಸ್ತಕ ನಾಡಿದ್ದು ದಿನಾಂಕ 28 ರ ಗುರುವಾರ ಬೆಳಿಗ್ಗೆ 10-30 ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರತಿಷ್ಠಾನದ ಖಜಾಂಚಿ ಆರ್.ಬಿ. ಪ್ರವೀಣ್‍ಕುಮಾರ್ ತಿಳಿಸಿದ್ದಾರೆ.

ಆವರಗೊಳ್ಳದ ಪುರವರ್ಗ ಹಿರೇಮಠದ ಶ್ರೀ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ, ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕೃತಿಯ ಸಂಗ್ರಹಕಾರ ಆನಂದತೀರ್ಥಾಚಾರ್‌ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಪುಸ್ತಕದ ಪರಿಚಯವನ್ನು ಕರ್ನಾಟಕ ರಾಜ್ಯ ಜ್ಯೋತಿಷ್ಯ ಹಾಗೂ ಜ್ಯೋತಿಷ್ಯ ಭೋದನೆಗಳ ಒಕ್ಕೂಟದ ಕಾರ್ಯದರ್ಶಿ ಬಿ.ಗಜೇಂದ್ರ ಮಾಡಲಿದ್ದಾರೆ. 

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಭಾಸ್ಕಾರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಗದಿಗೆಪ್ಪಯ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಹೆಚ್.ಎಸ್.ಮಂಜುನಾಥ ಕುರ್ಕಿ, ರಾಜ್ಯ ಜ್ಯೋತಿಷ್ಯ ಹಾಗೂ ಜ್ಯೋತಿಷ್ಯ ಭೋದನೆಗಳ ಒಕ್ಕೂಟದ ಖಜಾಂಚಿ ಡಾ. ಅನಂತ ರಾಘವನ್, ಜ್ಯೋತಿರ್ವಿಜ್ಞಾನ ಮಾಸಪತ್ರಿಕೆಯ ಸಂಪಾದಕ ವಿದ್ವಾನ್ ಗಣೇಶ್ ಹೆಗಡೆ ಆಗಮಿಸಲಿದ್ದಾರೆ. ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ಪ್ರಾಚಾರ್ಯರಾದ ಸಿ.ಆರ್. ಪ್ರಸನ್ನಕುಮಾರ್, ಉಪನ್ಯಾಸಕರಾದ ಪರಮೇಶ್ವರಾಚಾರ್, ಸಿ.ಜೆ. ಮಂಜುನಾಥ್,  ಹೆಚ್. ಷಣ್ಮುಖ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಜಿಲ್ಲೆ ಸಮಾಚಾರ ಬಳಗ ಸಹಕಾರದೊಂದಿಗೆ ನಡೆಯುವ ಈ ಸಮಾರಂಭಕ್ಕೆ ಸಾಹಿತ್ಯಾಸಕ್ತರು ಅಗಮಿಸಲು ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಶಿಷ್ಯ ವೃಂದದವರು ವಿನಂತಿಸಿದ್ದಾರೆ.