ದಾವಣಗೆರೆ, ಜ.21- ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಉತ್ತರ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಇಮ್ರಾನ್ ನೇತೃತ್ವದ ತಂಡ ನಗರದ ವಿಜಯಲಕ್ಷ್ಮಿರಸ್ತೆಯಲ್ಲಿ ಇಂದು ಫುಟ್ ಪಾತ್ ಮೇಲೆ ಹೆಚ್ಚುವರಿಯಾಗಿ ವಿಸ್ತರಣೆಯಾಗಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಿತು.
ಅಂಗಡಿ ಮಾಲೀಕರುಗಳಿಗೆ ಮತ್ತು ಇತರೆ ವ್ಯಾಪಾರಿಗಳಿಗೆ ಫುಟ್ ಪಾತ್ ಅನ್ನು ಅಕ್ರಮಿಸದಂತೆ ಪಿಎಸ್ಐ ಇಮ್ರಾನ್ ಸೂಚನೆ ನೀಡಿದರು. ಫುಟ್ ಪಾತ್ ಮೇಲೆ ವ್ಯಾಪಾರ ಮಾಡುವವರ ಹಾಗೂ ಅಂಗಡಿಗಳ ವಿರುದ್ಧ 15 ಪಿಟ್ಟಿ ಕೇಸ್ಗಳನ್ನು ದಾಖಲಿಸಲಾಗಿದೆ.
ಫುಟ್ಪಾತ್ ಮೇಲೆ ಅಂಗಡಿಗಳ ಸರಕುಗಳನ್ನು ಇಡಬಾರದು ಎಂದು ಈಗಾ ಗಲೇ ನೋಟಿಸ್ ನೀಡಿದ್ದು, ಇದಕ್ಕೆ ಸ್ಪಂದಿಸ ದವರ ಮೇಲೆ ದೂರು ದಾಖಲಿಸಲಾಗುತ್ತಿದೆ. ಇದೀಗ ಆರಂಭಿಸಿರುವ ತೆರವು ಕಾರ್ಯಾಚರಣೆಯು ಮುಂದುವರೆಯಲಿ ದ್ದು, ಕೆ.ಆರ್.ರಸ್ತೆ, ಎಂ.ಜಿ. ರಸ್ತೆ ಮತ್ತಿತರೆ ರಸ್ತೆಗಳಲ್ಲೂ ಕಾರ್ಯಾಚರಣೆ ನಡೆಯಲಿದೆ ಎಂದು ಪಿಎಸ್ಐ ಇಮ್ರಾನ್ ತಿಳಿಸಿದ್ದಾರೆ.
Leave a Reply