ಕನಕ ಪೀಠದ ಶ್ರೀಗಳಿಗೆ ಮಾಜಿ ಶಾಸಕ ಶಿವಶಂಕರ್ ಗೌರವಾರ್ಪಣೆ

ಕನಕ ಪೀಠದ ಶ್ರೀಗಳಿಗೆ ಮಾಜಿ ಶಾಸಕ ಶಿವಶಂಕರ್ ಗೌರವಾರ್ಪಣೆ

ಹರಿಹರ, ಜ.21- ಕುರುಬ ಸಮಾಜಕ್ಕೆ ಸರ್ಕಾರ ಎಸ್.ಟಿ. ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ  ಕಾಗಿನೆಲೆ ಕನಕ ಗುರುಪೀಠದಿಂದ ಬೆಂಗಳೂರಿನವರೆಗೆ ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರು  ಶ್ರೀಗಳನ್ನು ಸನ್ಮಾನಿಸಿ, ಗೌರವಿಸುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಸುರೇಶ್ ಚಂದಾಪೂರ್, ಜಗದೀಶ್ ಚೂರಿ, ಕುಣೆಬೆಳಕೆರೆ ದೇವೇಂದ್ರಪ್ಪ, ಜೆಡಿಎಸ್ ಪಕ್ಷದ ಅಡಿಕಿ ಕುಮಾರ್, ಮೌನೇಶ್ ಹಾಗು ಇತರರು ಹಾಜರಿದ್ದರು.

Leave a Reply

Your email address will not be published.