ಬಸವಾಪಟ್ಟಣದಲ್ಲಿ ಗ್ರಾ.ಪಂ. ಸದಸ್ಯರಿಗೆ ಸನ್ಮಾನ

ಬಸವಾಪಟ್ಟಣದಲ್ಲಿ ಗ್ರಾ.ಪಂ. ಸದಸ್ಯರಿಗೆ ಸನ್ಮಾನ

ಹರಿಹರ, ಜ.20- ಬಸವಾಪಟ್ಟಣ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಚ್. ಇಬ್ರಾಹಿಂ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಹಾಗೂ ಪರಾಭವಗೊಂಡವರಿಗೆ  ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಬಾಬಾಬುಡನ್ ದರ್ಗಾದಲ್ಲಿ ವಿನೂತನವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರೂ ಆದ ಡಾ. ವೈ. ರಾಮಪ್ಪ ಸರ್ಕಾರದ ಸಮಗ್ರ ಯೋಜನೆಗಳ ಕುರಿತು ನೂತನ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಅಗತ್ಯ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿದರು. ಕಾರ್ಯಕ್ರಮದ ರೂವಾರಿ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್ ಮಾತನಾಡಿದರು. ನೂತನ ಸದಸ್ಯರಾದ ಕುಸುಮಮ್ಮ, ಎಂ.ಎಸ್. ರಮೇಶ್, ಜರೀನಾ ಬಾನು, ಉಮಾದೇವಿ, ಮಂಜಾನಾಯ್ಕ, ಶಿವಾಜಿ, ಲಕ್ಷ್ಮೀದೇವಿ, ನಾಹೀದ್ ಬಾನು ಜಹೀರ್ ಪಟೇಲ್, ಫರೀದ ಬಾನು, ಅತಾವುಲ್ಲಾ, ಶೋಭಾ, ನೂರನಾಯ್ಕ ಇವರುಗಳನ್ನು ಸನ್ಮಾನಿಸಲಾಯಿತು.

ವಿಶೇಷವೆಂದರೆ ಪರಾಜಿತ ಅಭ್ಯರ್ಥಿಗಳನ್ನೂ ಸಹ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಹೀರ್ ಪಟೇಲ್, ಹೂವಿನಮಡು ಚನ್ನಬಸಪ್ಪ, ರುದ್ರಪ್ಪ, ಮಹಮ್ಮದ್ ಗೌಸ್, ಮಾರುತಿ, ಡಾ. ಸತೀಶ್ ಹಿರೇಮಠ, ಸದ್ದು, ನೂರ್‌ ಅಹಮ್ಮದ್ ಉಪಸ್ಥಿತರಿದ್ದರು.  ಅಯೂಬ್ ಖಾನ್ ಸ್ವಾಗತಿಸಿದರು. ಸತೀಶ್ ನಿರೂಪಿಸಿದರು. ಹಿದಾಯತ್ ವಂದಿಸಿದರು.

Leave a Reply

Your email address will not be published.