ಅವಕಾಶ ದೊರೆತರೆ ಕಸಾಪ ಸೇವೆಗೆ ಸಮಯ ಮುಡಿಪು

ಅವಕಾಶ ದೊರೆತರೆ ಕಸಾಪ ಸೇವೆಗೆ ಸಮಯ ಮುಡಿಪು

ದಾವಣಗೆರೆ, ಜ. 20- ಸುಮಾರು 15 ಕೋಟಿ ರೂ.ಗಳ ವೆಚ್ಚದಲ್ಲಿ ಕುಂದುವಾಡ ಕೆರೆ ಅಭಿವೃದ್ಧಿ ಕಾರ್ಯಕ್ಕೆ  ಪರಿಸರ ಪ್ರೇಮಿಗಳು, ಚಿಂತಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಊರ ಹೊರಗಿನ ಕೆರೆಗಳನ್ನು ಅಭಿವೃದ್ಧಿ ಮಾಡುವ ಬದಲು ನಗರದ ಮಧ್ಯಭಾಗದಲ್ಲಿನ ಕೆರೆಯನ್ನು ಅಭಿವೃದ್ಧಿ ಮಾಡುವ ನೆಪದಲ್ಲಿ ಜೀವ ವೈವಿಧ್ಯತೆಗೆ ತೊಂದರೆಯುಂಟು ಮಾಡಲಾಗುತ್ತಿದೆ ಎಂದು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪರಿಸರ ಪ್ರೇಮಿಗಳು ಆರೋಪಿಸಿದರು.

ಗೋಪಾಲಗೌಡ ಮಾತನಾಡಿ, ಕುಂದುವಾಡ ಕೆರೆಗೆ ಬರುವ 150ಕ್ಕೂ ಹೆಚ್ಚು ಹಕ್ಕಿ ಪ್ರಭೇದಗಳನ್ನು ಪಕ್ಷಿ ತಜ್ಞರು ಗುರುತಿಸಿದ್ದಾರೆ. ಅಭಿವೃದ್ಧಿಗೆಂದು ಕೆರೆ ಖಾಲಿ ಮಾಡುವಾಗ ಇವೆಲ್ಲವಕ್ಕೂ ತೊಂದರೆಯಾಗಲಿದೆ. ಇಲ್ಲಿಯೇ ಜೀವಿಸಿ ಸಂತಾನಾಭಿವೃದ್ಧಿ ಮಾಡಿಕೊಂಡಿದ್ದ ಜಲಚರಗಳ ಜೀವನ ದುಸ್ಥಿತಿಯಲ್ಲಿದೆ ಎಂದರು.

ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಪಾದಚಾರಿ ಮಾರ್ಗ ಸಾಕಷ್ಟು ದೊಡ್ಡದಿದ್ದು, ಅದರ ಅಗಲೀಕರಣ ಅಗತ್ಯವಿಲ್ಲ. ಕೆರೆ ಏರಿ ಅಗಲೀಕರಣ ನಡೆದರೆ ಸಾವಿರಾರು ಮರಗಳ ಮಾರಣ ಹೋಮ ಮಾಡಬೇಕಾಗುತ್ತದೆ.  ಈ ಎಲ್ಲಾ ಕಾಮಗಾರಿಗಳು ಮಾನವ ಕೇಂದ್ರಿತ ಅಭಿವೃದ್ಧಿಯೇ ಹೊರತು ಪರಿಸರ  ಸ್ನೇಹಿ ಅಭಿವೃದ್ಧಿಯಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಸರ ಸಂರಕ್ಷಣಾ ವೇದಿಕೆಯ ಗಿರೀಶ್ ದೇವರಮನಿ ಮಾತನಾಡುತ್ತಾ, ಕೆರೆಯ ಸುತ್ತ ಮುತ್ತಲಿನ ಲೇ ಔಟ್‌ಗೆ ಕೆರೆ ನೀರು ಬಸಿಯದಂತೆ ತಡೆದು, ಲೇ ಔಟ್‌ ಅಭಿವೃದ್ಧಿ ಮಾಡುವ ನೆಪದಲ್ಲಿ ಕುಂದುವಾಡ ಕೆರೆ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚರಂಡಿ ಸರಿ ಮಾಡಿಸಿ ಜನರಿಗೆ ಶುದ್ಧ ಗಾಳಿ ಸಿಗುವಂತೆ ಮಾಡಬೇಕು. ಏಕೈಕ ಪ್ರಕೃತಿ ತಾಣವಾಗಿರುವ ಕುಂದುವಾಡ ಕೆರೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಕೆರೆಯ ಸುತ್ತಾ ಯಾವುದೇ ಕಾಮಗಾರಿ ನಡೆಸದೆ ಪರಿಸರ ಸಂರಕ್ಷಿಸಬೇಕು. ಟಿವಿ ಸ್ಟೇಷನ್ ಹಾಗೂ ಬಾತಿ
ಕೆರೆ ಪುನಃಶ್ಚೇತನಗೊಳಿಸಬೇಕು ಎಂದು ಹೇಳಿದರು.

ಲಾಯರ್ ಸಿದ್ದಯ್ಯ ಮಾತನಾಡಿ, ಪರಿಣಿತರು, ಪರಿಸರ ಪ್ರೇಮಿಗಳ ವಿರೋಧವಿದ್ದರೂ ಕೆರೆ ಅಭಿವೃದ್ಧಿಗೆ 15ಕೋಟಿ ರೂ. ಖರ್ಚು ಮಾಡುವ ಅಗತ್ಯವೇ? ಇಷ್ಟೊಂದು ಹಠ ಮಾರಿ ಧೋರಣೆ ಏಕೆ? ಎಂದು ಪ್ರಶ್ನಿಸಿದರು.

Leave a Reply

Your email address will not be published.